ಯೋಗ ಧನುಷ್ ಪೂರ್ವಭಾವಿ ಕಾರ್ಯಕ್ರಮ

7
Published on

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಆಯುಷ್ ಸಹಯೋಗದಲ್ಲಿ ಭಾನುವಾರ ಲಲಿತ ಮಹಲ್ ಆವರಣದಲ್ಲಿ ಯೋಗ ಧನುಷ್ ಪೂರ್ವಭಾವಿ ಕಾರ್ಯಕ್ರಮ ನಡೆಯಿತು.

ಲಲಿತ ಮಹಲ್ ಅರಮನೆಯ ವ್ಯವಸ್ಥಾಪಕ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರಿನ ನಾನಾ ಯೋಗ ಸಂಸ್ಥೆ ಮುಖ್ಯಸ್ಥರಾದ ಡಾ.ಗಣೇಶ್ ಕುಮಾರ್, ಶಶಿಕುಮಾರ್, ದೇವರಾಜು, ನಂಜುಂಡಸ್ವಾಮಿ, ಬಿ.ಪಿ. ಮೂರ್ತಿ, ಶಿವಪ್ರಕಾಶ್, ಅನಂತು, ಪಶುಪತಿ, ಶ್ರೀಶೈಲಕುಮಾರ್, ಆಯುಷ್ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಯುಷ್ ಆರೋಗ್ಯ ಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಗ ತರಬೇತುದಾರರು ಹಾಗೂ ನೂರಾರು ಮಂದಿ ಯೋಗಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಸನ ಪ್ರದರ್ಶಿಸಿದರು.

ಆಯುಷ್ ಇಲಾಖೆಯಿಂದ ಜೂ.21ರಂದು ಸಾವಿರಾರು ಮಂದಿಯನ್ನು ಒಳಗೊಂಡಂತೆ 11ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಯೋಗಾಭ್ಯಾಸಕ್ಕೆ ಸಂಬಂಧಿಸಿದಂತೆ ನಾನಾ ಚಟುವಟಿಕೆ ಆಯೋಜಿಸಲಾಗಿದೆ. ಇಂದು ಮೊದಲ ಕಾರ್ಯಕ್ರಮವಾಗಿ ಯೋಗ ಧನುಷ್ ಆಯೋಜಿಸಲಾಗಿದೆ. ಅದರಂತೆ ಒಂದು ಪ್ರಸಿದ್ಧ್ದವಾದ ಸ್ಥಳದಲ್ಲಿ ಯೋಗಾಸಕ್ತರು ಸೇರಿ ಯೋಗಾಭ್ಯಾಸ ಮಾಡಿದರು.

‘ಯೋಗ ದಿನಾಚರಣೆಗೂ ಮುನ್ನ ಯೋಗ ಧ್ಯಾನ, ಯೋಗ ಧನುಷ್, ಹಸಿರು ಯೋಗ, ಯೋಗ ಅನ್‌ಪ್ಲಗ್ ಎಂಬ ನಾಲ್ಕು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಇಂದು ಮೊದಲಿಗೆ ಯೋಗ ಧನುಷ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 21ರ ಪ್ರಮುಖ ಕಾರ್ಯಕ್ರಮವನ್ನು ಕಳೆದ ಬಾರಿಯಂತೆ 15 ಸಾವಿರ ಜನ ಸೇರಿಸಿ ಯೋಗ ಸಂಗಮ ಎಂಬ ಹೆಸರಿನಲ್ಲಿ ಆಯೋಜಿಸಲಾಗುವುದು. ಇಲ್ಲವೇ 25 ಸಾವಿರ ಜನರನ್ನು ಒಳಗೊಂಡಂತೆ ಯೋಗ ಕುಂಭ್ ಮಾದರಿಯಲ್ಲಿ ಯೋಗ ದಿನ ಆಚರಿಸಲಾಗುತ್ತದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಸಿ. ರೇಣುಕಾದೇವಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net