ಯುದ್ದದ ವೇಳೆ ಆರೋಗ್ಯದ ಮುನ್ನೆಚ್ಚರಿಕೆ ಕಾರ್ಯಾಗಾರ

ctd.... medi
Published on

ಚಿತ್ರದುರ್ಗ: ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅನಸ್ತೇಶಿಯಾ ವಿಭಾಗದಲ್ಲಿ ಸೋಮವಾರ ಯುದ್ಧದ ಸಂದರ್ಭದಲ್ಲಿ ತೆಗೆದು ಕೊಳ್ಳುವ ಆರೋಗ್ಯದ ಮುನ್ನೆಚ್ಚರಿಕೆ ಕುರಿತ ಕಾರ್ಯಾಗಾರ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ನಿರ್ದೇಶಕ ಡಾ.ಬಿ.ವೈ. ಯುವರಾಜ್ ಮಾತನಾಡಿ, ಯುದ್ಧದ ಸಂದರ್ಭದಲ್ಲಿ ಹಿಂಸಾಚಾರಕ್ಕಿಂತ ಹೆಚ್ಚಾಗಿ ಆಹಾರ, ವಸತಿ, ನೀರು, ಬಟ್ಟೆ ಮತ್ತು ನೈರ್ಮಲ್ಯದಂತಹ ದೈನಂದಿನ ಸೌಲಭ್ಯಗಳ ಕೊರತೆಯೇ ಆರೋಗ್ಯದ ಮೇಲೆ ಗರಿಷ್ಠ ಹಾನಿ ಉಂಟು ಮಾಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎಚ್.ಮೇಘಾ, ಡಾ.ಪರಮಾನಂದ ರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net