ಯಾರೇ ನೇಮಕವಾದರೂ ಬಿಜೆಪಿಗೆ ಜನಾಶೀರ್ವಾದವಿಲ್ಲ

sudhakar (1)
Published on

ಚಿತ್ರದುರ್ಗ: ಯಾರೇ ನೇಮಕವಾದರೂ ರಾಜ್ಯದಲ್ಲಿ ಬಿಜೆಪಿ ಜನಾಶೀರ್ವಾದ ಗಳಿಸಲು ಸಾಧ್ಯವಿಲ್ಲ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಬಾಟಲಿಗೆ ಹಳೆ ವೈನ್ ಸುರಿದಂತೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಲಾರೆ ಎಂದರು.

ಬಿಜೆಪಿ ಸಿದ್ಧಾಂತಕ್ಕೂ ಕಾಂಗ್ರೆಸ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಆ ಪಕ್ಷದವರಿಂದ ಜಾತಿ-ಸಮಾಜ ಒಡೆದಾಳುವ ನೀತಿ ಕಂಡಿದ್ದೇವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತಮ ಅನುಭವ, ತಾಳ್ಮೆ, ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತಂದಿದ್ದಾರೆ. ಅವರಿಗೂ ವಿಜಯೇಂದ್ರಗೂ ಹೋಲಿಕೆ ಮಾಡಬೇಡಿ ಎಂದರು.

ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ನನ್ನ ಆಪ್ತರು. ಅವರ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಹಲವು ಕಾರಣದಿಂದ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಹೋಗಿದ್ದು, ಕಾಂಗ್ರೆಸ್‌ಗೆ ವಾಪಸ್ಸು ಮರಳಲಿದ್ದಾರೆ. ಎಲ್ಲಾ ಜಾತಿಯವರು ಪಕ್ಷದ ಜೊತೆಯಲ್ಲಿದ್ದು, ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗಳಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net