ಮ್ಯೂಸಿಕಲ್ ನೈಟ್ ಕಾರ್ಯಕ್ರಮ

Music
Published on

ಮೂನ್‌ಲೈಟ್ ಎಂಟರ್ಟೈನರ್ಸ್‌ ವತಿಯಿಂದ ಆನಂದ್ ಶೆಟ್ಟಿ ರಾಗ ಕ್ರಿಯೇಷನ್ಸ್ ಆಶ್ರಯದಲ್ಲಿ ಅ.26ರಂದು ಡಾ.ವಿಷ್ಣುವರ್ಧನ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂನ್‌ಲೈಟ್ ಸಂಸ್ಥೆಯ ಸ್ಟ್ಯಾನ್ಲಿ ಪಾರ್ಕರ್ ತಿಳಿಸಿದರು.

ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾಜ್ಯ ಸರ್ಕಾರ ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಿಸಿರುವುದು ವಿಷ್ಣು ಅಭಿಮಾನಿಗಳು ಹಾಗೂ ಇನ್ನಿತರರಿಗೆ ಸಂತಸ ತಂದಿದೆ. ತಮ್ಮ ಸಂಸ್ಥೆ ಸಹ ಪ್ರತಿವರ್ಷ ವಿಷ್ಣುವರ್ಧನ್ ನೆನಪಿನಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net