ಮೌಲ್ಯಾಧಾರಿತ ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿ

2
Published on

ನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್‌ಐಇ) ದೇಶದ ಅಗ್ರ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿದ್ದು, ಮೌಲ್ಯಾಧಾರಿತ ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.

ಈ ವರ್ಷ ಕಾಲೇಜಿನ 680 ವಿದ್ಯಾರ್ಥಿಗಳ ಕ್ಯಾಪಸ್ ಸಂದರ್ಶದ ಮೂಲಕ ಕೆಲಸ ಪಡೆದಿದ್ದಾರೆ. ವರ್ಷಕ್ಕೆ 48 ಲಕ್ಷ ದಿಂದ ಕನಿಷ್ಠ 9 ಲಕ್ಷದ ವರೆಗೆ ಸಂಬಳ ಪಡೆದಿದ್ದಾರೆ.

1946 ಸ್ಥಾಪಿತವಾದ ಎನ್‌ಐಇ ಅನುದಾನಿತ ಸಂಸ್ಥೆಯಾಗಿದ್ದು, ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯಿಂದ ಅನುಮೋದನೆಗೊಂಡಿದೆ. 2007ರಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸ್ವಾಯತ್ತ ಸ್ಥಾನಮಾನವನ್ನು ಪಡೆದುಕೊಂಡಿದೆ ಹಾಗೂ ನ್ಯಾಕ್ ಮಾನ್ಯತೆಯನ್ನೂ ಹೊಂದಿದೆ.

ಬಿಇಯಲ್ಲಿ ಸಿವಿಲ್ ಇಂಜಿನಿಯರಿಂಗ್, ಮೆಕಾನಿಕಲ್, ಎಲೆಕ್ಟ್ರಿಕ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಸೈನ್ಸ್ (ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ), ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಬೇಡಿಕೆ ಇದೆ. ಇನ್ನು ಪಿಜಿ ಪ್ರೋಗ್ರಾಂ (ಎಂ.ಟೆಕ್/ಎಂಸಿಎ) ಗಳಾದ ಪವರ್ ಸಿಸ್ಟಮ್ಸ್, ಹೈಡ್ರಾಲಿಕ್ಸ್, ಕಂಪ್ಯೂಟರ್ ಅಪ್ಲಿಕೇಷನ್ ಟು ಇಂಡಷ್ಟ್ರಿಯಲ್ ಡ್ರೈವ್ಸ್, ಪ್ರೊಡಕ್ಷನ್ ಇಂಜಿನಿಯರಿಂಗ್ ಆ್ಯಂಡ್ ಸಿಸ್ಟಮ್ ಟೆಕ್ನಾಲಜಿ, ಮಾಹಿತಿ ತಂತ್ರಜ್ಞಾನ (ಐಟಿ), ಇಂಡಸ್ಟ್ರಿಯಲ್ ಆಟೋಮೇಷನ್ ಆ್ಯಂಡ್ ರೋಬಾಟಿಕ್ಸ್, ಕಂಪ್ಯೂಟರ್ ನೆಟ್‌ವರ್ಕ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್, ನೆಟ್‌ವರ್ಕಿಂಗ್ ಆ್ಯಂಡ್ ಇಂಟರ್‌ನೆಟ್ ಇಂಜಿನಿಯರಿಂಗ್, ಮೆಷಿನ್ ಡಿಸೈನ್ ಮತ್ತು ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್‌ಗಳು ಲಭ್ಯವಿದೆ.

ಎನ್‌ಐಇ ಎಲ್ಲ ಕ್ಯಾಂಪಸ್ ಉತ್ಕೃಷ್ಟದ ಸೌಕರ್ಯಗಳನ್ನು ಹೊಂದಿದ್ದು, ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ. ಯುವಕ, ಯುವತಿಯರಿಗೆ ಪ್ರತ್ಯೇಕ ವಸತಿ ಸೌಕರ್ಯಗಳಿವೆ.

ಎನ್‌ಐಇ ಸಂಸ್ಥೆಯ ತರಬೇತಿ ಮತ್ತು ಉದ್ಯೋಗ ವಿಭಾಗವು ವಿದ್ಯಾರ್ಥಿಗಳಿಗೆ ಕೋರ್ಸ್ ಮುಗಿಯುತ್ತಿದ್ದಂತೆ ಉದ್ಯೋಗಾವಕಾಸ ಕಲ್ಪಿಸಲು ಪ್ರಮುಖ ಪಾತ್ರ ವಹಿಸಿದೆ. ಅಂತಿಮ ವರ್ಷಕ್ಕೆ ಕ್ಯಾಂಪಸ್ ಸಂದರ್ಶನಗಳನ್ನು ಏರ್ಪಡಿಸಲು 300ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಉದ್ಯೋಗ ಗಿಟ್ಟಿಸಲು ಬೇಕಾದ ಕೌಶಲಗಳ ಬಗ್ಗೆ ತರಬೇತಿ, ತಾಂತ್ರಿಕ ಸೆಮಿನಾರ್‌ಗಳು, ಕಾರ್ಯಾಗಾರಗಳು ಹಾಗೂ ಉನ್ನತ ಅಧ್ಯಯನ ಆಕಾಂಕ್ಷಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುತ್ತಿದೆ.

ವಿಶ್ವೇಶ್ವರನಗರದ ಇಂಜಿನಿಯರಿಂಗ್ ಕ್ಯಾಂಪಸ್ ಬಳಿಯೇ ಎನ್‌ಐಇ ಪ್ರಥಮ ದರ್ಜೆ ಕಾಲೇಜು ಕ್ಯಾಂಪಸ್ ಇದೆ. ಇಲ್ಲಿ ಬಿಸಿಎ, ಬಿ.ಕಾಂ, ಬಿಬಿಎ ಹಾಗೂ ಬಿಎಸ್ಸಿ ಕೋರ್ಸ್‌ಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net