ಮೌಲ್ಯಗಳಿಂದ ಬದುಕು ಕಟ್ಟಿಕೊಳ್ಳಬೇಕು

Live by values
ಸಿಂದಗಿ ಪಟ್ಟಣದ ಸಿ.ಎಂ. ಮನಗೂಳಿ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ವಿಶ್ರಾಂತ ಪ್ರಾಚಾರ್ಯ ಬಿ.ಎಂ. ಬಿರಾದಾರ ಸಸಿಗೆ ನೀರುಣಿಸಿ ಉದ್ಘಾಟಿಸಿದರು. ಡಾ. ಎಸ್.ಎಸ್. ದೇಸಾಯಿ, ಬಿ.ಎಂ. ಬಿರಾದಾರ, ಡಾ. ಬಿ.ಜಿ. ಪಾಟೀಲ ಮತ್ತಿತರರಿದ್ದರು.
Published on

ಸಿಂದಗಿ: ವಿದ್ಯಾರ್ಥಿ ಜೀವನ ಬದುಕಿನ ಮೌಲ್ಯಗಳಿಗೆ ಮೊದಲ ಹೆಜ್ಜೆ. ಇಲ್ಲಿ ನಾವುಗಳು ಶಿಸ್ತು, ಸಂಯಮ ಹಾಗೂ ಸಮಯ ಪರಿಪಾಲನೆಯ ಪಾಠ ಕಲಿತರೆ ಸುಂದರವಾದ ಬದುಕು ರೂಪಿಸಿಕೊಳ್ಳಬಹುದು ಎಂದು ಚಡಚಣದ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಎಸ್. ದೇಸಾಯಿ ಹೇಳಿದರು.

ನಗರದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸತತ ಪರಿಶ್ರಮದ ಓದಿನಿಂದ ತಮ್ಮ ಜೀವನ ಕಟ್ಟಿಕೊಳ್ಳುವ ಮೂಲಕ ಕುಟುಂಬ, ಕಾಲೇಜಿಗೆ ಕೀರ್ತಿ ತರಬೇಕು ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಶ್ರಾಂತ ಪ್ರಾಚಾರ್ಯ ಬಿ.ಎಂ. ಬಿರಾದಾರ ಮಾತನಾಡಿ, ಕಾಲೇಜಿನಲ್ಲಿನ ಶಿಕ್ಷಕರ ಸಹಕಾರ, ವಿಷಯದ ತಿಳುವಳಿಕೆಗಳ ಜತೆಗೆ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಬಿ.ಜಿ. ಪಾಟೀಲ ಮಾತನಾಡಿ, ಪದವಿ ನಂತರದಲ್ಲಿ ವಿವಿಧ ನಾಗರಿಕ ಸೇವೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷಗೆಳಿಗೆ ಸಿದ್ಧರಾಗಬೇಕು ಎಂದರು.

ಐಕ್ಯೂಎಸಿ ಸಂಯೋಜಕ ಡಾ. ಅಂಬರೀಶ ಬಿರಾದಾರ, ಒಕ್ಕೂಟದ ಕಾರ್ಯಾಧ್ಯಕ್ಷ ರಾಹುಲ್ ಕಾಂಬಳೆ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶರಣಮ್ಮ ಬಿರಾದಾರ, ಒಕ್ಕೂಟದ ಮಹಿಳಾ ಪ್ರತಿನಿಧಿ ಭಾಗ್ಯಶ್ರೀ ಬಿರಾದಾರ, ಡಾ. ಆರತಿ ಅಳಗುಂಡಗಿ, ಡಾ. ರಾಜೇಶ್ವರಿ ಹಲಸಂಗಿ ಹಾಗೂ ಮಹಾವಿದ್ಯಾಲಯದ ಬೋಧಕರು, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net