ಮೋಸ ಹೋದವರು ದಾಖಲೆಗಳೊಂದಿಗೆ ಮಾಹಿತಿ ನೀಡಿ

Crime Logo
Published on

ನಗರದ ಯೂನಿವರ್ಸಲ್ ಡೆವಲಪರ್ಸ್‌ ಕಂಪನಿಯಿಂದ ಮೋಸ ಹೋದ ಸಾರ್ವಜನಿಕರು ದಾಖಲೆಗಳೊಂದಿಗೆ ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದಾರೆ.

ಯೂನಿವರ್ಸಲ್ ಡೆವಲಪರ್ಸ್‌ ಕಂಪನಿಯವರು ಟ್ರೇಡಿಂಗ್ ಮಾಡಿ ಲಾಭಾಂಶ ಕೊಡಿಸುವುದಾಗಿ 200ಕ್ಕೂ ಅಧಿಕ ಜನರಿಂದ ಹಣವನ್ನು ಪಡೆದು ಮೋಸ ಮಾಡಿರುವ ಬಗ್ಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವು ಹಾಲಿ ಸಿಸಿಬಿ ಘಟಕದಲ್ಲಿ ತನಿಖೆಯಲ್ಲಿದೆ.

ಈ ಸಂಬಂಧ ಕಂಪನಿಯವರಿಂದ ಸಾರ್ವಜನಿಕರು ಮೋಸ ಹೋಗಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಮೈಸೂರು ನಗರ ಸಿಸಿಬಿ ಘಟಕದ ಸಂಘಟಿತ ಅಪರಾಧ ಮತ್ತು ರೌಡಿ ಪ್ರತಿಬಂಧಕ ದಳದ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಭೇಟಿ ಮಾಡಿ ಪೂರಕ ದಾಖಲೆಯೊಂದಿಗೆ ದೂರು ನೀಡಲು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net