ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವುದು ಜನರ ಬಯಕೆ

PM Narendra Modi
Published on

ಮೈಸೂರು: ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಜನ ಬಯಸಿದ್ದು, ಇದು ಸಾಧ್ಯವಾಗುವ ಸಮಯ ಹತ್ತಿರ ಬಂದಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮಾಜಿ ಅಧ್ಯಕ್ಷ ಎನ್.ಅರುಣ್‌ಕುಮಾರ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬುಧವಾರ ಚಾಮುಂಡೇಶ್ವರಿ ಕ್ಷೇತ್ರದ ಎಸ್‌ಬಿಎಂ ಲೇಔಟ್‌ನಲ್ಲಿ ಬಿಜೆಪಿ-ಜೆಡಿಎಸ್ ಮುಖಂಡ ಜತೆ ಜಂಟಿಯಾಗಿ, ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದರು.
ಪ್ರಸ್ತುತ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದ್ದು, ಇದಕ್ಕೆ ಕಾರಣ ಮೋದಿ ಅವರ ಅಭಿವೃದ್ಧಿ ಕಾರ್ಯ. 2047ರ ವೇಳೆಗೆ ದೇಶ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ಇರಲಿದ್ದು, ನಾವೆಲ್ಲರೂ ಸಹಕಾರ ನೀಡಬೇಕು ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿನ ಅಭಿವೃದ್ಧಿ ಕಾರ್ಯವನ್ನು ಜನ ಮೆಚ್ಚಿದ್ದಾರೆ ಎಂದರು.
ಬೋಗಾದಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಲಿನ ಪುಟ್ಟೇಗೌಡ ಜೈಕುಮಾರ್, ಪಂಚಾಯಿತಿ ಮಾಜಿ ಸದಸ್ಯರಾದ ರವಿಕುಮಾರ್, ಕೆಂಚೇಗೌಡ, ಸ್ವಾಮಿ, ಮುಖಂಡರಾದ ನಂದೀಶ್, ಬಸವರಾಜ್, ಯಮುನಾ ಕೃಷ್ಣಮೂರ್ತಿ, ಬಸವೇಗೌಡ, ಮಾರುತಿ ಲೋಕೇಶ್, ಉಮೇಶ್, ಮಂಜು, ಅವಿನಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net