ಮೊಬೈಲ್ ಗೀಳಿನಿಂದ ಏಕಾಗ್ರತೆ ಹಾಳು

14
Published on

ಮಕ್ಕಳಲ್ಲಿ ಮೊಬೈಲ್ ಬಳಕೆಯ ಗೀಳು ಹೆಚ್ಚಾಗುತ್ತಿದ್ದು, ಇದರಿಂದ ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್(ಜನ್ನಿ) ಆತಂಕ ವ್ಯಕ್ತಪಡಿಸಿದರು.

ನಗರದ ಬೋಗಾದಿಯಲ್ಲಿರುವ ಧ್ವನ್ಯಾಲೋಕದಲ್ಲಿ ಬುಧವಾರ ಜನಮನ ಸಾಂಸ್ಕೃತಿಕ ಸಂಘಟನೆಯಿಂದ ನಡೆದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದಕ್ಕೆ ಪರೋಕ್ಷವಾಗಿ ಪಾಲಕರು ಸಹ ಕಾರಣರಾಗಿದ್ದು, ಅವರನ್ನು ನೋಡಿ ಮಕ್ಕಳು ಸಹ ಅನುಕರಣೆ ಮಾಡುವ ಮೂಲಕ ಕಲಿಯುತ್ತಿದ್ದಾರೆ ಎಂದು ಹೇಳಿದರು.

ಮಕ್ಕಳು ಅವರದ್ದೇ ಆದ ಲೋಕದಲ್ಲಿ ಇದ್ದು, ಅವರನ್ನು ಕಟ್ಟಿ ಹಾಕುವ ಕೆಲಸವನ್ನು ಮಾಡಬಾರದು, ರಂಗ ಭೂಮಿಯ ಮೂಲಕ ಮಕ್ಕಳು ಏಕಾಗ್ರತೆಯನ್ನು ಕಲಿಯಬಹುದು ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ ಡಾ.ರತಿರಾವ್ ಮಾತನಾಡಿ, ಮಕ್ಕಳಲ್ಲಿ ಏಕಾಗ್ರತೆಯಿಂದ ಕೊರತೆ ಹೆಚ್ಚಾಗಿದ್ದು, ರಂಗಭೂಮಿಯಿಂದ ಏಕಾಗ್ರತೆ ವೃದ್ಧಿಯಾಗಲಿದೆ ಎಂದು ಹೇಳಿದರು. ನಟ ಸುಪ್ರೀತ್ ಭಾರದ್ವಾಜ್ ಮಾತನಾಡಿದರು. ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಧ್ವನ್ಯಾಲೋಕದ ಮುಖ್ಯಸ್ಥೆ ಪ್ರೊ.ಜಯಶ್ರೀ ಸಂಜಯ್, ಶಿಬಿರದ ನಿರ್ದೇಶಕಿ ಕೆ.ಆರ್.ಸುಮತಿ, ರಂಗ ನಿರ್ದೇಶಕರಾದ ರೂಬಿನ್ ಸಂಜಯ್, ವಿದುಷಿ ಹರಿಣಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net