ಮೈಸೂರು ತಲುಪಿದ ಟಿಬಿಟಿಯನ್ ಬೈಕ್ ರ‌್ಯಾಲಿ

bikes
Published on

ಟಿಬೆಟಿಯನ್ ಪ್ರಾಂತ್ಯದಲ್ಲಿ ಚೀನಾ ನಡೆಸುತ್ತಿರುವ ದೌರ್ಜನ್ಯ ವಿರೋಧಿಸಿ ಹಾಗೂ ಇದರತ್ತ ವಿಶ್ವದ ಗಮನ ಸೆಳೆಯುವ ನಿಟ್ಟಿನಲ್ಲಿ ಟಿಬಿಟಿಯನ್ ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ ಬೈಕ್ ರ‌್ಯಾಲಿ ನಗರಕ್ಕೆ ಸೋಮವಾರ ಆಗಮಿಸಿದ್ದು, ಈ ವೇಳೆ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಟಿಬಿಟಿಯನ್ ಯುವ ಕಾಂಗ್ರೆಸ್ ಅಧ್ಯಕ್ಷ ಗೌಪೊ ಧುಂಡೆಪ್ ತಿಳಿಸಿದರು.

ನ.22ರಂದು ಈ ಬೈಕ್ ರ‌್ಯಾಲಿ ಅರುಣಾಚಲ ಪ್ರದೇಶದ ಭಾರತ- ಟಿಬೆಟಿಯನ್ ಗಡಿಯಲ್ಲಿನ ಬುಮ್ಲಾ ಪಾಸ್ ಬಳಿಯಿಂದ ಹೊರಟು ಇದುವರೆಗೆ 20 ರಾಜ್ಯಗಳಲ್ಲಿ 15 ಸಾವಿರ ಕಿ.ಮೀ. ಸಂಚರಿಸಿ ಈಗ ಮೈಸೂರು ತಲುಪಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದುವರೆಗೆ ಹಲವಾರು ಸಂಸದರು, ಸ್ಥಳೀಯ ಸಿಎಂಗಳು ಹಾಗೂ ರಾಜ್ಯಪಾಲರನ್ನು ಭೇಟಿ ನೀಡಿ ಟಿಬೆಟ್ ಸ್ವತಂತ್ರಗೊಳಿಸುವ ಬಗ್ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದೆ. ಈ ತಂಡದಲ್ಲಿ 12 ಮಂದಿ ಬೈಕರ್‌ಗಳಿದ್ದಾರೆ. ಈ ರ‌್ಯಾಲಿ ಹಾದುಹೋದ ಕಡೆಯಲ್ಲೆಲ್ಲ ಉತ್ತಮ ಸ್ಪಂದನೆ ದೊರೆತಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ತ್ರೆರಿಂಗ್ ಚಾಪಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net