

ಮೈಸೂರು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವು ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ರಚಿಸಲಾಗಿದ್ದು, ಪ್ರಾಧಿಕಾರದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಪೊಲೀಸ್ ಆಯುಕ್ತರು, ಮೈಸೂರು ನಗರ ಇವರು ಸದಸ್ಯ ಕಾರ್ಯದರ್ಶಿಯಾಗಿದ್ದು, ಪೊಲೀಸ್ ಅಧೀಕ್ಷಕರು, ನಿವೃತ್ತ ಅಧಿಕಾರಿ (ಉಪ ವಿಭಾಗಾಧಿಕಾರಿಗಳಿಗೆ ಕಡಿಮೆ ಇಲ್ಲದ ದರ್ಜೆ ನಿವೃತ್ತ ಅಧಿಕಾರಿ) ಮತ್ತು ನಾಗರೀಕ ಸಮಾಜದ ಸದಸ್ಯರು ಸದಸ್ಯರಾಗಿರುತ್ತಾರೆ. ಮೈಸೂರು ಜಿಲ್ಲಾ ದೂರು ಪ್ರಾಧಿಕಾರದಲ್ಲಿ ನಾಗರೀಕ ಸಮಾಜದ ಸದಸ್ಯರ ಹುದ್ದೆಯು ಖಾಲಿ ಇದ್ದು ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಮೈಸೂರು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಸೇವೆಯನ್ನು ಸಲ್ಲಿಸಲು ಇಚ್ಚಿಸುವವವರು ಆಗಸ್ಟ್ 8 ರವರೆಗೆ ಜಿಲ್ಲಾಧಿಕಾರಿಗಳ ಕಛೇರಿ, ಕೊಠಡಿ ಸಂಖ್ಯೆ 108, ಜಿಲ್ಲಾ ಮಟ್ಟದ ಅಧಿಕಾರಿಗಳ ಸಂಕೀರ್ಣ, ಸಿದ್ದಾರ್ಥನಗರ, ಮೈಸೂರು ಇಲ್ಲಿಗೆ ಅರ್ಜಿಯನ್ನು ತಮ್ಮ ವ್ಯಕ್ತಿ ಪರಿಚಯ, ಆಧಾರ ಕಾರ್ಡ್ ಮತ್ತು ಸೇವೆ ಸಲ್ಲಿಸಿರುವ ಕ್ಷೇತ್ರದ ವಿವರ ಹಾಗೂ ದಾಖಲಾತಿಗಳೊಂದಿಗೆ ಸಲ್ಲಿಸಬೇಕಾಗಿದೆ ಎಂದು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜಿ. ಲಕ್ಷೀಕಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.