

ಜುಲೈ 22 ರಂದು ಬೆಳಿಗ್ಗೆ 10 ರಿಂದ ಸಂಜೆ 06:00 ಘಂಟೆಯವರೆಗೆ 66/11 ಕೆ.ವಿ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಿoದ ಹೊರಹೊಮ್ಮುವ 11 ಕೆ.ವಿ. ಆರ್.ಟಿ.ಓ, ಕೋರ್ಟ್ ಮತ್ತು ಜುಲೈ 23 ರಂದು ಬೆಳಿಗ್ಗೆ 10 ರಿಂದ ಸಂಜೆ 06 ಘಂಟೆಯವರೆಗೆ 11 ಕೆ.ವಿ. ಲಕ್ಷ್ಮಿಪುರಂ ಫೀಡರ್ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಆರ್.ಟಿ.ಓ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ಬಲ್ಲಾಳ್ ಸರ್ಕಲ್, ಚಾಮರಾಜಪುರಂ, ಜೈನ್ ಭವನ್, ಚಾಮರಾಜಮೊಹಲ್ಲಾ, ಬೆಸ್ತರಗೇರಿ, ವಿಷ್ಣುವರ್ಧನ್ ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಕೋರ್ಟ್ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ಗೀತಾ ರಸ್ತೆ, ಮಹಾರಾಜ ಹಾಸ್ಟೆಲ್, ರಾಮಸ್ವಾಮಿ ವೃತ್ತ, ಜಿಲ್ಲಾ ಪಂಚಾಯತ್, ನ್ಯಾಯಾಲಯ ಆವರಣ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಲಕ್ಷ್ಮಿಪುರಂ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು: ಲಕ್ಷ್ಮಿಪುರಂ, ಹೊಸಕೇರಿ, ಸುಣ್ಣದಕೇರಿ, ನೆಲ್ಲೂರ್ ಶೆಡ್, ಕೆ.ಆರ್ ವನಂ, ರೆಹಮಾನಿಯಾ ಮೊಹಲ್ಲಾ, ಮೇದರ್ ಕೇರಿ, ಕುಂಬಾರ ಕೇರಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯಗುವುದು ಆದುದರಿಂದ ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕು ಎಂದು ಚಾ.ವಿ.ಸ.ನಿ.ನಿ.ಯ., ನ.ರಾ.ಮೊಹಲ್ಲಾ, ಕಾರ್ಯ ಮತ್ತು ಪಾಲನೆ ವಿಭಾಗ, ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.