ಮೈಸೂರಿನಲ್ಲಿ ಮಳೆ

rain111
Published on

ಜಿಲ್ಲೆಯಲ್ಲಿ ಮಳೆ ಆರ್ಭಟ ಭಾನುವಾರವೂ ಮುಂದುವರಿದಿದ್ದು, ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಮೋಡ ಕವಿದ ವಾತಾವರಣ ಇತು. ಸಂಜೆ 4 ಗಂಟೆಗೆ ವೇಳೆಗೆ ಸ್ವಲ್ಪ ಸೋನೆಯೊಂದಿಗೆ ಆರಂಭವಾದ ಮಳೆ ನಂತರ ಜೋರಾಗಿಯೇ ಸುರಿಯಿತು. ಬಳಿಕ ಇನ್ನಷ್ಟು ಜೋರಾಗಿ ಸುರಿಯಿತು. ಪರಿಣಾಮ, ತಗ್ಗು ಪ್ರದೇಶಕ್ಕೆ ನೀರು ಹರಿಯಿತು. ಕೊಂಚ ಕಾಲದ ಬಿಡುವಿನ ನಂತರ ಶುರುವಾದ ಜಿಟಿಜಿಟಿ ಮಳೆ ಆಗೊಮ್ಮೆ, ಈಗೊಮ್ಮೆ ಜೋರಾಗಿ ಸುರಿದಿದ್ದು, ಮೈಸೂರು ಮಲೆನಾಡಿನಂತೆ ಗೋಚರವಾಯಿತು.

ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಹಿತಕರವಾದ ತಂಪುಗಾಳಿ ಬೀಸಿತು. ಸಾರ್ವ್ಜನಿಕರು ಸ್ವೆಟರ್, ಜರ್ಕಿನ್, ಕೈಗವಸುಗಳನ್ನು ಧರಿಸಿಕೊಂಡು ಚಳಿಯಿಂದ ರಕ್ಷಿಣೆ ಪಡೆದು ಬೆಚ್ಚಗಾದರು. ಸಾರ್ವಜನಿಕರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದ ಕಾರಣ ಸಂಚರಿಸಲು ವಾಹನ ಸವಾರರು ಹರಸಾಹಸಪಟ್ಟರು. ಸಾಕಷ್ಟು ಜನ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದು, ಮಳೆ ನಿಂತ ನಂತರ ತೆರಳಿದರು. ರಸ್ತೆ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net