ಮೈಲಾರದಲ್ಲಿ ಡಿ.ಕೆ.ಶಿವಕುಮಾರ ಪಾಪ ಪ್ರಾಯಶ್ಚಿತ್ತ !

IMG-20201218-WA0007.jpg
Published on

ಹೂವಿನ ಹಡಗಲಿ (ಬಳ್ಳಾರಿ):
ತಾಲೂಕಿನ ಮೈಲಾರಕ್ಕೆ ಭೇಟಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೈಲಾರಲಿಂಗೇಶ್ವರನ ದರ್ಶನ ಪಡೆದರು. ಪಾಪ ಪ್ರಾಯಶ್ಚಿತ್ತಕ್ಕಾಗಿ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
2017 ರಲ್ಲಿ ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ನಲ್ಲಿ ಮೈಲಾರಕ್ಕೆ ಆಗಮಿಸಿದ್ದರು. ಕಾರಣಿಕ ನುಡಿಯುವ ವೇಳೆ ಡೆಂಕಣಮರಡಿಗೆ ಆಗಮಿಸಿದ್ದರಿಂದ ಭಕ್ತರ ಚಿತ್ತ ಭಂಗವಾಗಿತ್ತು. ಡೆಂಕಣಮರಡಿ ಕಾರಣಿಕ ನುಡಿಯುವ ಸ್ಥಳವಾಗಿದೆ. ಕ್ಷೇತ್ರದ ಸಂಪ್ರದಾಯ ಉಲ್ಲಂಘಿಸಿದ್ದರಿಂದಲೇ ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಜೈಲು ಪಾಲಾಗಬೇಕಾಯಿತು ಎಂಬ ಮಾತುಗಳು ಕೇಳಿಬಂದಿದ್ದವು. ಮೈಲಾರಲಿಂಗನ ಶಾಪವೇ ಇದಕ್ಕೆಲ್ಲ ಕಾರಣ. ಆದಷ್ಟು ಬೇಗ ಕ್ಷೇತ್ರಕ್ಕೆ ಬಂದು ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಮತ್ತಷ್ಟು ತೊಂದರೆ ತಪ್ಪಿದ್ದಲ್ಲ ಎಂದು ದೇವಸ್ಥಾನದ ಧರ್ಮದರ್ಶಿಗಳೂ ಹೇಳಿದ್ದರು.
ಇದರಿಂದಾಗಿ ಮೈಲಾರಕ್ಕೆ ಆಗಮಿಸಿರುವ ಡಿ.ಕೆ.ಶಿವಕುಮಾರ್ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net