

ಬಾಳೆಹೊನ್ನೂರು: ಕರ್ಕೇಶ್ವರ ಗ್ರಾಮದ ಮೇಲ್ಪಾಲ್‌ನ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ 48ನೇ ವರ್ಷದ ಗಣೇಶೋತ್ಸವಕ್ಕೆ ಸೋಮವಾರ ವಿಜೃಂಭಣೆಯ ತೆರೆ ಬಿದ್ದಿತು.
ಕಳೆದ ಆರು ದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಪೂಜಾ ಸೇವೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂತಿಮ ದಿನವಾದ ಮಂಗಳವಾರ ಗಣಪತಿಗೆ ಪೂಜೆ,
ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಮಾಡಲಾಯಿತು. ನಂತರ ಗಣಪತಿ ವಿಗ್ರಹವನ್ನು ಆಕರ್ಷಕ ಅಲಕೃಂತ ವಾಹನದಲ್ಲಿ ಕುಳ್ಳಿರಿಸಿ
ಚಲಿಸುವ ಆರ್ಕೆಸ್ಟ್ರಾ, ವಿವಿಧ ವಾದ್ಯಗೋಷ್ಠಿ, ವೇಷಭೂಷಣಗಳೊಂದಿಗೆ ಮೆರವಣಿಗೆ ನಡೆಸಿ ಮೇಲ್ಪಾಲ್ ಹಳ್ಳದಲ್ಲಿ ವಿಸರ್ಜಿಸಲಾಯಿತು.
ಸಮಿತಿ ಅಧ್ಯಕ್ಷ ಎಂ.ನಾರಾಯಣ, ಉಪಾಧ್ಯಕ್ಷ ಎ.ಸಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಭಾಸ್ಕರ್, ಖಜಾಂಚಿ ಬಿದ್ದಪ್ಪ, ಸದಸ್ಯರಾದ ಎಂ.ಆರ್.ದಿನಕರ್, ರಾಜೇಶ್ ಕೇಶವತ್ತಿ, ಶಶಿಕುಮಾರ್,
ಸುದರ್ಶನ್, ಎಚ್.ಟಿ.ರಾಜು, ಸುಚಿತ ಹೆಗ್ಡೆ, ನಂದಿನಿ ರಾಜೇಶ್, ರಜಿತ್, ಮಂಜುನಾಥ್ ತುಪ್ಪೂರು, ನಾರಾಯಣ ಶೆಟ್ಟಿ ಮತ್ತಿತರರಿದ್ದರು.