ಮೇ 20 ರಂದು ಮೈಸೂರಿನ ಹಲವು ಭಾಗದಲ್ಲಿ ವಿದ್ಯುತ್  ವ್ಯತ್ಯಯ*

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ಮೇ 20 ಬೆಳಗ್ಗೆ 10 ರಿಂದ 5:30 ಗಂಟೆಯವರೆಗೆ 66/11 ಕೆ.ವಿ ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಮೊಹಮ್ಮದ್ ಸೇಠ್ ಬ್ಲಾಕ್, ಗಾಂಧಿನಗರ, ವೀರನಗೆರೆ, ಎ.ಜೆ ಬ್ಲಾಕ್, ಕುರಿಮಂಡಿ, ಕೆ.ಎಸ್.ಆರ್.ಟಿ.ಸಿ ಡಿಪೋ, ಎನ್.ಆರ್ ಮೊಹಲ್ಲಾ ನಾರ್ಥ್-ಈಸ್ಟ್, ರಾಜೇಂದ್ರನಗರ, ಸುಭಾಷ್‌ನಗರ, ಬಡಾಮಕಾನ್, ಸೋನಿಯಾ ಗಾಂಧಿ ಬಡಾವಣೆ, ಕೆಸರೆ 3ನೇ ಹಂತ, ಶಿವಾಜಿ ರಸ್ತೆ ಎ ಬಡಾವಣೆ ಮತ್ತು ಬಿ ಬಡಾವಣೆ, ಬಿ.ಟಿ ಮಿಲ್, ಎಲ್.ಐ.ಸಿ ಮತ್ತು ಮದರ್ ಬ್ಲಾಕ್, ತಿಲಕ್‌ನಗರ, ನೆಲ್ಸನ್ ಮಂಡೇಲಾ ರಸ್ತೆ, ಸಯ್ಯಾಜಿರಾವ್ ರಸ್ತೆ, ಭಾವನಾ ಮಾರ್ಬಲ್, 2ನೇ ಈದ್ಗಾ, ಬಿ.ಬಿ ಕೇರಿ, ಸಿ.ವಿ ರಸ್ತೆ, ಸೆಂಟ್ ಜೋಷೆಫ್ ಕಾಲೇಜು, ಡಫ್ ಅಂಡ್ ಡಮ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಚಾ.ವಿ.ಸ.ನಿ.ನಿ.ಯ ನ.ರಾ.ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net