ಮೆಟ್ಲಿಂಗ್ ಕಾಮಗಾರಿಗೆ ಭೂಮಿಪೂಜೆ

Published on

ಚಾಮರಾಜನಗರ: ತಾಲೂಕಿನ ಮಲ್ಲನಯ್ಯನಪುರದ ಮುಖ್ಯ ರಸ್ತೆಯಿಂದ ಆದರ್ಶ ಶಾಲೆವರೆಗೆ 8 ಲಕ್ಷ ರೂ. ವೆಚ್ಚದಲ್ಲಿ ಮೆಟ್ಲಿಂಗ್ ಮಾಡುವ ಕಾಮಗಾರಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.


ಬಳಿಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಮಲ್ಲಯ್ಯನಪುರ ಬಳಿ ಆದರ್ಶ ಶಾಲೆಗೆ ಹೋಗುವ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಸದ್ಯದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ. ಇತ್ತೀಚೆಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ರಸ್ತೆ ಸರಿಯಲ್ಲ ಎಂದು ಪ್ರತಿಭಟನೆ ಮಾಡಿರುವುದು ನನ್ನ ಗಮನಕ್ಕೆ ಬಂತು. ಇದಕ್ಕೆ ಪೂರಕವಾಗಿ ಮಲ್ಲಯ್ಯನಪುರ ಮುಖ್ಯ ರಸ್ತೆಯಿಂದ ಆದರ್ಶ ಶಾಲೆಯವರೆಗೆ ಮೆಟ್ಲಿಂಗ್ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಒಂದೂವರೆ ಕಿ.ಮೀ. ರಸ್ತೆಯನ್ನು ಡಾಂಬರೀಕಣ ಮಾಡುವ ಪ್ರಸ್ತಾವನೆಯನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ಕಳುಹಿಸಿಕೊಟ್ಟಿದ್ದು, ಸದ್ಯದಲ್ಲಿಯೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿ ಆರಂಭಿಸುವುದಾಗಿ ಶಾಸಕರು ತಿಳಿಸಿದರು.

ಶಿವಪುರ ಗ್ರಾಪಂ ಅಧ್ಯಕ್ಷೆ ಎಂ.ಸಿ. ಮಹದೇವಮ್ಮ, ಸದಸ್ಯರಾದ ಶೋಭಾರಾಣಿ, ಶಿವಕುಮಾರ್, ಶಿವಣ್ಣ, ಗುತ್ತಿಗೆದಾರ ಸುಬ್ಬೇಗೌಡ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಲಿಂಗರಾಜು, ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net