ಮೃತ್ಯುಂಜಯ ಹೋಮ ಹಮ್ಮಿಕೊಂಡ ಶಾಸಕ ರೇಣುಕಾಚಾರ್ಯ

IMG-20200601-WA0027.jpg
Published on

ದಾವಣಗೆರೆ: ಕರೊನಾ ನಿಯಂತ್ರಣವಾಗಿ ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಲಿ ಎಂದು ಪ್ರಾರ್ಥಿಸಿ ಹೊನ್ನಾಳಿಯಲ್ಲಿ ಸೋಮವಾರ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿದೆ.
ಹೊನ್ನಾಳಿಯ ಹಿರೇಕಲ್ಮಠದ ಆವರಣದಲ್ಲಿ ಹೋಮ ಹಮ್ಮಿಕೊಳ್ಳಲಾಗಿದೆ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೋಮಕ್ಕೆ ಚಾಲನೆ ನೀಡಿದರು.
ಕರೊನಾ ನಿಯಂತ್ರಣದ ಜತೆ ಲೋಕ ಸುಭಿಕ್ಷವಾಗಿರಲೆಂದು ಪ್ರಾರ್ಥನೆ. ಆಯುಷ್ಯ, ಆರೋಗ್ಯ ವೃದ್ಧಿಗೆ, ರೈತ ವರ್ಗದ ಒಳಿತಿಗೆ, ಕಾಲಕಾಲಕ್ಕೆ ಮಳೆ, ಬೆಳೆಯಾಗಲೆಂಬ ಉದ್ದೇಶ. ಋತ್ವಿಜರಿಂದ ನವಗ್ರಹ ಪೂಜೆ ಸಲ್ಲಿಸಿ ಮೃತ್ಯುಂಜಯ್ಯ ಹೋಮ ಆರಂಭ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net