ಮೂಡಿಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ

5 mdg 1 band
ಮೂಡಿಗೆರೆ ತಾಲೂಕಿನ ಗೋಣಿಬೀಡು ಪಟ್ಟಣದಲ್ಲಿ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್‌ನಲ್ಲಿ ಪಾಲ್ಗೊಂಡರು.
Published on

ಮೂಡಿಗೆರೆ: ಕಾಶ್ಮೀರದಲ್ಲಿ ಉಗ್ರರ ದಾಳಿ ಮತ್ತು ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕರೆ ನೀಡಿದ್ದ ಬಂದ್‌ಗೆ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲೂಕಿನ ಜನ್ನಾಪುರ ಮತ್ತು ಗೋಣಿಬೀಡು ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ಅಲ್ಲಿ ಆಟೋಗಳು ಎಂದಿನಂತೆ ಸಂಚರಿಸಿದವು. ಹೊರವಲಯದ ವರ್ತಕರು ತಮ್ಮ ಅಂಗಡಿಗಳ ಅರ್ಧ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗಿದ್ದರು. ಈ ಎರಡು ಪಟ್ಟಣದಲ್ಲಿ ಜನ ಸಂಚಾರ ವಿರಳವಾಗಿತ್ತು. ಮೂಡಿಗೆರೆ ಪಟ್ಟಣ, ಹ್ಯಾಂಡ್ ಪೋಸ್ಟ್ ಮತ್ತು ಬಿಳಗುಳ ಈ ಮೂರು ಕಡೆ ಏಪ್ರಿಲ್ 25 ರಂದು ಬಂದ್ ಕರೆ ನೀಡಲಾಗಿತ್ತು. ಹಾಗಾಗಿ ಸೋಮವಾರ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು. ಮಾಕೋನಹಳ್ಳಿ, ನಂದಿಪುರ, ಬಸ್ಕಲ್, ಬೀಜುವಳ್ಳಿ, ಕಸ್ಕೇಬೈಲ್, ಬೆಟ್ಟದಮನೆ, ಕಿರುಗುಂದ, ಬಿದರಹಳ್ಳಿ, ಹೊರಟ್ಟಿ, ವಿದ್ಯಾನಗರ ಮತ್ತಿತರ ಕಡೆ ಬಂದ್ ನಡೆಯಲಿಲ್ಲ. ವರ್ತಕರು ಎಂದಿನಂತೆ ಅಂಗಡಿಗಳ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net