

ಬೈಲಕುಪ್ಪೆ: ಇಲ್ಲಿನ ಬಿಎಂ ರಸ್ತೆ ಪಕ್ಕದಲ್ಲಿ ಪೋಸ್ಟ್ ಬಾಕ್ಸ್ ಮುರಿದು ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣರಂತೆ ತಿರುಗಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹಲವು ತಿಂಗಳ ಹಿಂದೆಯೇ ಪೋಸ್ಟ್ ಬಾಕ್ಸ್ ಮುರಿದು ಬಿದ್ದಿದೆಯಾದರೂ ಪಕ್ಕದಲ್ಲಿ ಇರುವ ಅಂಚೆ ಕಚೇರಿ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದಿರುವುದು ವಿಪರ್ಯಾಸ. ಪೋಸ್ಟ್ ಬಾಕ್ಸ್ ಸಾರ್ವಜನಿಕರಿಗೆ ಅವಶ್ಯಕತೆ ಇದ್ದು, ಇನ್ನಾದರೂ ಸಂಬಂಧಪಟ್ಟವರು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.