ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯದಲ್ಲಿನ ಮುಡಾ ಹಗರಣಕ್ಕೆ ಸಂಬAಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಮೆರವಣಿಗೆಯ ಮೂಲಕ ಮೆಕ್ಕೆ ವೃತ್ತಕ್ಕೆ ಆಗಮಿಸಿದ ಪ್ರತಿಭಟನಕಾರರು, ಬಿಜೆಪಿ, ಜೆಡಿಎಸ್ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಜನಪರವಾದ ಯೋಜನೆಗಳನ್ನು ಜಾರಿ ತಂದು ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಮುಂಬರುವ ತಾಪಂ ಜಿಪಂ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಲಿದ್ದು ಹೇಗಾದರೂ ಮಾಡಿ ಸರ್ಕಾರಕ್ಕೆ ಮತ್ತು ಸಿದ್ದರಾಮಯ್ಯ ನವರ ಆಡಳಿತಕ್ಕೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಒಳಸಂಚು ಮಾಡಲು ಹೊರಟಿದ್ದಾರೆ. ನಾವು ಕಾನುನು ಹೋರಾಟ ನಡೆಸುತ್ತೇವೆ. ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಮೈತ್ರಿ ಪಕ್ಷಗಳಿಗೆ ತಕ್ಕ ಉತ್ತರ ನೀಡಲಿದ್ದು ಜನರು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ ಎಂದರು.
ಮಾಲೂರು ಶಾಸಕ ಕೆ.ವೈ ನಂಜೇಗೌಡ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತವನ್ನು ಸಹಿಸದ ಮೈತ್ರಿ ಪಕ್ಷಗಳು ಸಿದ್ದರಾಮಯ್ಯ ಅವರ ರಾಜೀನಾಮೆ ಮೂಲಕ ಅಧಿಕಾರದ ಹಗಲು ಕನಸು ಕಾಣುತ್ತಿದ್ದಾರೆ. ರಾಜ್ಯದ ಜನರು ಸೇರಿದಂತೆ ೧೩೬ ಶಾಸಕರು ಸೇರಿದಂತೆ ಸಚಿವ ಸಂಪುಟದ ಸಚಿವರು ಸಿದ್ದರಾಮಯ್ಯ ಪರವಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರz Àಶೇ. ೪೦ ರ ಕಮಿಷನ್ ವಿರುದ್ದ ರಾಜ್ಯಪಾಲರಿಗೆ ದೂರುಗಳು ಕೊಟ್ಟಾಗ ಯಾಕೆ ಕ್ರಮ ವಹಿಸಲಿಲ್ಲ. ರಾಜ್ಯಪಾಲರು ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹಳ್ಳಿಗಳಿಂದ ಜನರು ಮೈತ್ರಿ ಪಕ್ಷಗಳ ವಿರುದ್ದ ತಿರುಗಿ ಬೀಳಲಿದ್ದಾರೆ ಎಂದರು.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ. ರಾಜ್ಯದಲ್ಲಿರುವ ರಾಜ್ಯಪಾಲರ ಕಛೇರಿಂ ಇಂದು ಬಿಜೆಪಿ ಪಕ್ಷದ ಕಛೇರಿಯಾಗಿದೆ. ಕೇಂದ್ರ ಸರ್ಕಾರದ ಕೈಗೊಂಬೆಯ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಜನತೆಯ ಪರವಾಗಿ ನ್ಯಾಯಕೇಳಕ್ಕೆ ನಾವು ಬಂದಿದ್ದೇವೆ. ಹಿಂದಿನ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಬೈರತಿ ಬಸವರಾಜ್ ಉಸ್ತುವಾರಿ ಸಚಿವರಾಗಿ ಬಿಜೆಪಿ ನೇತೃತ್ವದ ಸರ್ಕಾರವೇ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ನವರ ೪೦ ವರ್ಷಗಳ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಕಳಂಕ ರಹಿತ ರಾಜಕಾರಣಿಗೆ ಕಳಂಕವನ್ನು ತರಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಮಾಡಿದ್ದಾರೆ. ಇವರಿಗೆ ಯಾವುದೇ ನೈತಿಕತೆ ಇಲ್ಲ. ಹಿಂದೆ ಬಿಜೆಪಿ ಸರ್ಕಾರದ ವಿರುದ್ದ ದೂರು ಕೊಟ್ಟಾಗ ಮೌನವಾಗಿದ್ದ ರಾಜ್ಯಪಾಲರು ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡವರು ದೂರು ಕೊಟ್ಟರೆ ನೋಟೀಸ್ ಕೊಡತ್ತಾರೆ ಎಂದರೆ ರಾಜ್ಯಪಾಲರ ಯಾರ ಪರವಾಗಿದ್ದಾರೆ. ಕುಮಾರಸ್ವಾಮಿಯ ಊರು ಯಾವುದು ಅವರಿಗೆ ಮುಡಾದಲ್ಲಿ ಸೈಟ್ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.
ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ರಾಜ್ಯದಲ್ಲಿ ಒಬ್ಬ ಬ್ರೋಕರ್ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ, ಜೆಡಿಎಸ್ ಐಟಿ ಸೆಲ್ ಅಧ್ಯಕ್ಷ ಸ್ನೇಹಮಯಿ ಕೃಷ್ಣ ಮತ್ತು ಬಿಜೆಪಿ ಶಾಸಕರ ಸಂಬAದಿ ಪ್ರದೀಪ್ ದೂರು ಕೊಟ್ಟಿದ್ದಾರೆ. ಯಾವುದೇ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸದೇ ಏಕಾಏಕಿ ಸಿಎಂ ವಿರುದ್ಧ ನೋಟೀಸ್ ನೀಡಿದ್ದಾರೆ. ದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ಇಲ್ಲದ ಪಕ್ಷಗಳ ಸರ್ಕಾರಗಳ ವಿರುದ್ದ ಕೇಂದ್ರ ಸರ್ಕಾರದ ನೇತೃತ್ವದ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರುವ ಮೈತ್ರಿ ಪಕ್ಷಗಳ ವಿರುದ್ದ ಹಳ್ಳಿಗಳಿಂದ ಪ್ರತಿಭಟನೆ ನಡೆಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ವಿ.ಆದಿನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಸೀಸಂದ್ರ ಗೋಪಾಲಗೌಡ, ಮುಖಂಡರಾದ ಗದ್ದೆಕಣ್ಣೂರು ದಯಾನಂದ್, ಚಂಜಿಮಲೆ ರಮೇಶ್, ಕೆ.ಜಯದೇವ್, ನಾಗರಾಜ್, ಮೈಲಾಂಡಹಳ್ಳಿ ಮುರಳಿ, ರವಿರಾಮಸ್ವಾಮಿ, ಹೊನ್ನೇನಹಳ್ಳಿ ಯಲ್ಲಪ್ಪ, ರಂಗನಾಥ್, ವೈ. ಶಿವಕುಮಾರ್, ರತ್ನಮ್ಮ, ಮಮತಾರೆಡ್ಡಿ, ವಕ್ಕಲೇರಿ ರಾಜಪ್ಪ, ಅಂಬರೀಶ್, ಆಫ್ಸರ್, ಷಂಷೀರ್, ಮಂಜುನಾಥ್, ಯುವ ಕಾಂಗ್ರೆಸ್ ಸುನಿಲ್ ನಂಜೇಗೌಡ, ಅಫ್ರಿದ್, ಉರಟಾಗ್ರಹಾರ ಚೌಡರೆಡ್ಡಿ ಮುಂತಾದವರು ಇದ್ದರು.
ಚಿತ್ರ ೧೯ ಕೆ.ಎಲ್.ಆರ್. ೦೧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ಶಾಸಕ ಕೆ.ವೈ ನಂಜೇಗೌಡ ಮುಂತಾದವರಿದ್ದರು.