

ಸರಗೂರು: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಜನರ ಬೆಂಬಲ2023ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ರಾಜ್ಯದ ಜನತೆ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ಅಪ್ಪಾಜಿ ಕ್ಯಾಂಟೀನ್ ಸಂಸ್ಥಾಪಕ ಎಂ.ಕೃಷ್ಣನಾಯಕ ಭವಿಷ್ಯ ನುಡಿದರು.
ತಾಲೂಕಿನ ಹಾದನೂರು ಮತ್ತು ಎಂ.ಸಿ. ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿಗೆ ಗ್ರಾಮ ಹಾಗೂ ಚನ್ನಗುಂಡಿ ಗ್ರಾಮಗಳಿಗೆ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನಪರವಾಗಿ ಆಡಳಿತ ನೀಡಿದ್ದರು. ರೈತರ ಸಾಲ ಮನ್ನಾ ಮಾಡಿದ್ದರು. ಹತ್ತು ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದ ಇವರ ಜನಪರ ಕಾರ್ಯಕ್ರಮಗಳನ್ನು ಜನರು ಮರೆತಿಲ್ಲ. ಆದಕಾರಣ ಈ ಬಾರಿ ಚುನಾವಣೆಯಲ್ಲೂ ಜೆಡಿಎಸ್ ಅನ್ನು ಜನರು ಬೆಂಬಲಿಸುತ್ತಾರೆ ಎಂದು ತಿಳಿಸಿದರು.
ಎಚ್.ಡಿ.ಕೋಟೆ ತಾಲೂಕಿನಲ್ಲಿ ಅಪ್ಪಾಜಿ ಕ್ಯಾಂಟೀನ್ ನಡೆಯುತ್ತಿದೆ. ಸರಗೂರು ತಾಲೂಕಿನಲ್ಲಿ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಅಪ್ಪಾಜಿ ಕ್ಯಾಂಟೀನ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ಮುಖಂಡರಾದ ಬಿ.ಮಟಕೆರೆ ಜಿತೇಂದ್ರ, ಬಿದರಹಳ್ಳಿ ಸೋಮು, ಚಾಮನಹಳ್ಳಿ ನರಸಿಂಹರಾಜು, ಗುಜ್ಜಪ್ಪಹುಂಡಿ ಸತೀಶ್, ಮಂಜುನಾಥ, ಗ್ರಾಪಂ ಸದಸ್ಯ ಚಕ್ಕೂರು ಮಂಜು, ಲೋಹಿತ್, ಹೈರಿಗೆ ಸಿರಿ, ಮಾದಾಪುರ ಗಿರೀಶ್, ಬೋಪನಹಳ್ಳಿ ಶಿವು, ಎಚ್. ಮಟಕೆರೆ ಭಾಸ್ಕರ್, ಕೋಳಗಾಲ ಮಂಜೇಶ್, ಮುಳ್ಳೂರು ನಿಂಗರಾಜು, ಬಡಗಲಪುರ ದಿನೇಶ್, ವಕೀಲ ಪ್ರಶಾಂತ್, ಮುತ್ತಿಗೆಹುಂಡಿ ಬಸವಣ್ಣ, ಎತ್ತಿಗೆ ಶೇಖರ್ ಇದ್ದರು.