ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ

16 KRN-1-
ಕೆ.ಆರ್.ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಯುವಕರನ್ನು ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಸ್ವಾಗತಿಸಿದರು.
Published on

ಕೆ.ಆರ್.ನಗರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಪಾಡ್ಯ ಮಹದೇವಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.


ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿರುವ ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್ ನಿವಾಸದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಚುಂಚನಕಟ್ಟೆ ಹೋಬಳಿ ಕರ್ತಾಳು ಗ್ರಾಮದ ಒಕ್ಕಲಿಗ ಸಮಾಜದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ಆಡಳಿತ ಮತ್ತು ಜನ ವಿರೋಧಿನೀತಿಯಿಂದ ಬೇಸತ್ತಿರುವ ಜನ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನೀಡಲು ತೀರ್ಮಾನ ಮಾಡಿದ್ದು ಇದು ಮುಂಬರುವ ಚುನಾವಣೆಯಲ್ಲಿ ಸಾಕಾರ ಗೊಳ್ಳಲಿದೆ ಎಂದರು.


ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್ ಮಾತನಾಡಿ, 2 ಚುನಾವಣೆಯಲ್ಲಿ ಪರಾಭವಗೊಂಡಿರುವ ನಮ್ಮ ಕುಟುಂಬವನ್ನು ಈ ಬಾರಿ ತಾಲೂಕಿನ ಮತದಾರ ಪ್ರಭುಗಳು ಗೆಲುವಿನ ದಡ ಸೇರಿಸಲಿದ್ದು, ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆ ಎಂದರು.

ಯುವ ಮುಖಂಡರಾದ ಅಮಿತ್ ಗುಂಡ, ಅಭಿಷೇಕ್, ಬಾಲರಾಜ್, ಅರುಣ್, ಪಾಕಿ ಗೌಡ, ಮಾದೇಗೌಡ, ಸಂತೋಷ್, ಪರೀಕೋಟಿ, ನಂದನ, ಗಣೇಶ್, ಪ್ರವೀಣ್, ನವೀನ್, ಲೋಕೇಶ್, ಮಹದೇವ್, ಅಮಿತ್, ಅಭಿಷೇಕ್, ಪಾರ್ಥ, ನಿರಂಜನ್ ಮತ್ತು ಮುಸ್ಲಿಂ ಮುಖಂಡರಾದ ರಿಯಾಜ್ ಹಾಗೂ ಸಬೀರ್ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳಲಾಯಿತು. ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಯುವ ಕಾಂಗ್ರೆಸ್ ಮುಖಂಡ ಭರತ್ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net