ಮುಂಚೂಣಿ ಸೇನಾನಿಗಳಿಗೇ ಬೇಕು 21 ಸಾವಿರ ಲಸಿಕೆ

h5-covid vaccine
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ 21 ಸಾವಿರ ‘ಹೆಲ್ತ್ ಕೇರ್ ವರ್ಕರ್’ಗಳಿಗೆ ಕೋವಿಡ್ ಲಸಿಕೆ ವಿತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

‘ಕೋವಿನ್ ಸೆಂಟರ್ ಆಪ್’ ಮೂಲಕ ನೋಂದಣಿ ಪ್ರಕ್ರಿಯೆ ನಡೆದಿದೆ. ಮೊದಲ ಹಂತದಲ್ಲಿ ವೈದ್ಯರು, ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ಟಾಫ್ ನರ್ಸ್, ಗ್ರುಪ್ ‘ಡಿ’, ಖಾಸಗಿ ಆಸ್ಪತ್ರೆ ವೈದ್ಯರು ಲಸಿಕೆ ಪಡೆಯಲಿದ್ದಾರೆ.

ಎರಡನೇ ಹಂತದಲ್ಲಿ ಸರ್ಕಾರಗಳು ಗುರುತಿಸಿದ ಫ್ರಂಟ್​ಲೈನ್ ಕರೊನಾ ಸೇನಾನಿಗಳಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪೊಲೀಸ್ ಇಲಾಖೆ, ಸಶಸ್ತ್ರ ಪಡೆ, ಮಹಾನಗರ, ನಗರಸಭೆ ಸಿಬ್ಬಂದಿ ಇದ್ದಾರೆ. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು, ಮಧುಮೇಹ ಸೇರಿ ಇತರ ತೀವ್ರ ತರಹದ ಕಾಯಿಲೆ ಹೊಂದಿದವರಿಗೆ ಲಸಿಕೆ ಲಭಿಸಲಿದೆ.

ಧಾರವಾಡ ಜಿಲ್ಲೆಯ 32 ಪ್ರಾಥಮಿಕ ಆರೋಗ್ಯ ಕೇಂದ್ರ, 19 ನಗರ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್್ಸ, ಜಿಲ್ಲಾಸ್ಪತ್ರೆ, 3 ತಾಲೂಕು ಆಸ್ಪತ್ರೆ, ಎಸ್​ಡಿಎಂನಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಯ್ದ 5 ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ವಿತರಿಸುವ ಕುರಿತು ಚಿಂತನೆ ನಡೆದಿದೆ.

61 ಕೋಲ್ಡ್ ಸ್ಟೋರೇಜ್ ಗುರುತು

ಮೊದಲ ಹಂತದಲ್ಲಿ ಬರುವ ಕರೊನಾ ಲಸಿಕೆ ಸಂಗ್ರಹಕ್ಕೆ ಜಿಲ್ಲೆಯಲ್ಲಿ 61 ಕೋಲ್ಡ್ ಸ್ಟೋರೇಜ್ (ಐಎಲ್​ಆರ್) ಗುರುತಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬಂದರೆ ಪಶು ಸಂಗೋಪನಾ ಇಲಾಖೆ, ಸುಚಿರಾಯು ಆಸ್ಪತ್ರೆ, ಜಿಲ್ಲಾಸ್ಪತ್ರೆಯ ಕೂಲರ್ ಸೇವೆ ಪಡೆದು ಸಂಗ್ರಹಿಸುವ ಸಾಧ್ಯತೆ ಇದೆ. ಸಿರಿಂಜ್ ಮತ್ತಿತರ ವೈದ್ಯಕೀಯ ಪರಿಕರ ಸಂಗ್ರಹಕ್ಕೆ ಆಹಾರ ಇಲಾಖೆಯ ಗೋದಾಮುಗಳ ಬಳಕೆ ಮಾಡಲು ತೀರ್ವನಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಕೋವಿನ್ ಸೆಂಟರ್ ಆಪ್’ ಮೂಲಕ ಹೆಸರು ನೋಂದಣಿ ಮಾಡಲಾಗುತ್ತಿದೆ. ವ್ಯಾಕ್ಸಿನ್ ಬಂದ ನಂತರ ಹೇಗೆಲ್ಲ ವಿತರಣೆ ಮಾಡಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧಪಡಿಸಲಾಗಿದೆ. | ಡಾ. ಎಸ್.ಎಂ. ಹೊನಕೇರಿ, ಕೋವಿಡ್ ಲಸಿಕೆ ವಿತರಣಾ ಕೇಂದ್ರದ ಅಧಿಕಾರಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net