ಮಾಸಿಕ ಸಂತೆಯಿಂದ ಆರ್ಥಿಕ ಬಲ

6sri-1 santhe
ಶೃಂಗೇರಿ ತಾಲೂಕು ಬೇಗಾರು ಜಿಪಿಎಲ್‌ಎ್ ಮಾಸಿಕ ಸಂತೆಯನ್ನು ಅಧ್ಯಕ್ಷೆ ದೇವಮ್ಮ ಹಾಗೂ ಪದಾಧಿಕಾರಿಗಳು ಉದ್ಘಾಟಿಸಿದರು. ಶಾಲಿನಿ, ಮಧುರಾ, ದೇವಮ್ಮ, ಪ್ರಕಾಶ್ ಇದ್ದರು.
Published on

ಶೃಂಗೇರಿ: ತಾಲೂಕಿನ ಬೇಗಾರು ಜಿಪಿಎಲ್‌ಎ್ ಮಾಸಿಕ ಸಂತೆಯನ್ನು ಅಧ್ಯಕ್ಷೆ ದೇವಮ್ಮ ಹಾಗೂ ಪದಾಧಿಕಾರಿಗಳು ಭಾನುವಾರ ಉದ್ಘಾಟಿಸಿದರು.

ಕಾರ್ಯಕ್ರಮದ ವ್ಯವಸ್ಥಾಪಕ ಆದರ್ಶ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಮನೆಯಲ್ಲಿ ಗೃಹ ಉತ್ಪನ್ನಗಳನ್ನು ತಯಾರಿಸಿ ಮಾಸಿಕ ಸಂತೆಗಳ ಮೂಲಕ ಮಾರಾಟ ಮಾಡಿ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಮಾರುಕಟ್ಟೆ ಕೇವಲ ತಾಲೂಕಿಗೆ ಸೀಮಿತವಾಗಿರದೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ನಡೆಯುವ ಸರಸ್ ಮೇಳಗಳಲ್ಲಿ ಭಾಗವಹಿಸಿ ಹೆಚ್ಚು ಆದಾಯ ಗಳಿಸುತ್ತಿದೆ ಎಂದರು.

ಕೃಷಿಯೇತರ ತಾಲೂಕು ವ್ಯವಸ್ಥಾಪಕರಾದ ಚೈತ್ರ ವಿನಯ್ ಮಾತನಾಡಿ, ಮಾಸಿಕ ಸಂತೆಗಳ ಮೂಲಕ ಮಹಿಳೆಯರು ಉತ್ಪನ್ನಗಳ ಪ್ರದರ್ಶನ ಜತೆಗೆ ಮಾರಾಟ ಮಾಡುವ ಮೂಲಕ ಸಂಘದ ಸದಸ್ಯರ ಜೀವನೋಪಾಯ ಚಟುವಟಿಕೆಗಳ ಅಭಿವೃದ್ಧಿಪಡಿಸುವುದು ಒಕ್ಕೂಟದ ಮೂಲ ಉದ್ದೇಶವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳನ್ನು ಮಹಿಳೆಯರು ಸದ್ಬಳಕ್ಕೆ ಮಾಡಿಕೊಂಡು ಜೀವನವನ್ನು ಸಮರ್ಥವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪದಾಧಿಕಾರಿಗಳಾದ ಪೂರ್ಣಿಮಾ, ಶಾಲಿನಿ, ಗ್ರಾಪಂ ಉಪಾಧ್ಯಕ್ಷ ಲಕ್ಷ್ಮೀಶ್, ಸದಸ್ಯರಾದ ಪ್ರಕಾಶ್, ಸಿಬ್ಬಂದಿ ಮಧುರಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net