

ಅರಟಾಳ: ನಂಬಿಕೆ ಇಟ್ಟು ನಡೆದರೆ, ಭವ ಬಂಧನ ದೂರವಾಗುತ್ತದೆ ಎಂದು ದೇವಸ್ಥಾನ ಕಮಿಟಿ ಅಧ್ಯ ಶಿವಪ್ಪ ಹಟ್ಟಿ ಹೇಳಿದರು. ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಳಿಂಗೇಶ್ವರ ದೇವರ ಕುದುರೆ ಮೇಲಿರುವ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ 201 ಮುತೆದೆಯರ ಕುಂಭಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ವರ್ಷದ ಹನ್ನೆರಡು ತಿಂಗಳಲ್ಲಿ ಶ್ರಾವಣ ಮಾಸ ಶ್ರೇಷ್ಠ ಎಂದರು.
ಕುಂಭಮೇಳ ಹಾಗೂ ವಾದ್ಯಮೇಳ, ಜಯೂಷದೊಂದಿಗೆ ಗ್ರಾಮದ ಹೊರವಲಯದಿಂದ ಮಾಳಿಂಗೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಜರುಗಿತು. ಅರ್ಚಕ ಶಿವಲಿಂಗ ಪೂಜಾರಿ, ಶಿವಪ್ಪ ಹಟ್ಟಿ, ರಾಮಪ್ಪ ಪೂಜಾರಿ, ಮಲ್ಲಪ್ಪ ಪೂಜಾರಿ, ಗಿರಮಲ್ಲ ಸಿಂದೂರ, ಹಣಮಂತ ಪೂಜಾರಿ, ಶ್ರೀಶೈಲ ಪೂಜಾರಿ, ಅರ್ಚಕ ನಿಂಗಪ್ಪ ಪೂಜಾರಿ, ಹನುಮಂತ ಬಾನುಶೆ, ಯಲ್ಲಪ್ಪ ಹಟ್ಟಿ, ಅಶೋಕ ಪೂಜಾರಿ, ಲಕ್ಕಪ್ಪ ಪೂಜಾರಿ, ಮಾಳಪ್ಪ ಕಾಂಬಳೆ ಇದ್ದರು.