ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಉತ್ತಮ ಮಾವಿನ ಫಸಲಿನ ನಿರೀಕ್ಷೆಯಲ್ಲಿದ್ದ ರೈತನಿಗೆ ಗರ ಬಡಿದಂತೆ ಆಗಿದೆ. ಕಳೆದ ಒಂದು ವಾರದಿಂದ ಮಾವಿನ ಮರಗಳಲ್ಲಿ ಹೂವಿನ ಜೊತೆಗೆ ಚಿಗುರು ಕಾಣಿಸಿಕೊಂಡಿದೆ. ಇದರಿಂದ ಜಿಗಿ ಹುಳ ಸೇರಿದಂತೆ ವಿವಿಧ ಕೀಟ ಭಾದೆಗಳು ಮಾವಿನ ಫಸಲನ್ನು ಕಾಡುತ್ತಿವೆ ಎಂಬ ಭೀತಿ ರೈತರಲ್ಲಿ ಉಂಟಾಗಿದೆ.
ಕಳೆದ ಐದಾರು ವರ್ಷಗಳಿಂದ ಮಾವಿನ ಫಸಲಿಗೆ ಪಕೃತಿ ಒಂದಲ್ಲ ಒಂದು ರೀತಿಯಲ್ಲಿ ಕಾಡತೊಡಗಿದೆ. ಕಳೆದ ವರ್ಷವೂ ಸೇರಿದಂತೆ ಎರಡು ಮೂರು ವರ್ಷಗಳಿಂದ ಪ್ರಾರಂಭದಲ್ಲಿ ಮಾವಿನ ಮರಗಳಲ್ಲಿ ಹೂವು ಕಾಣಿಸಿಕೊಂಡು ಉತ್ತಮ ಫಸಲಿನ ನಿರೀಕ್ಷೆ ಉಂಟು ಮಾಡಿ ಕೊನೆ ಗಳಿಗೆಯಲ್ಲಿ ಹೂವು ಉದುರುವುದು, ಕಚ್ಚಿದ ಕಾಯಿ ನೆಲಕಚ್ಚುವುದು ಸೇರಿದಂತೆ ಕೊಯ್ಲಿಗೆ ಬಂದ ಸಂದರ್ಭದಲ್ಲಿ ಕೀಟಭಾಧೆಗಳ ಜೊತೆಗೆ ಮಳೆ ಗುಡುಗು ಆರ್ಭಟಗಳು ಸೇರಿದಂತೆ ಬೆಲೆ ಕುಸಿತ ಮುಂತಾದ ಕಾರಣಗಳಿಂದ ಕೈಗೆ ಬಂದ ಬಾಯಿಗೆ ಬರದಂತೆ ಆಗಿ ನಷ್ಟ ಅನುಭವಿಸುತ್ತಲೇ ರೈತರು ಬಂದಿದ್ದಾರೆ.
ಈ ವರ್ಷ ಒಂದು ತಿಂಗಳು ತಡವಾಗಿ ಮಾವಿನ ಮರಗಳಲ್ಲಿ ಹೂವು ಕಾಣಿಸಿಕೊಂಡಿತ್ತು. ಮಾವಿನ ಹೂವು ಮರಗಳಲ್ಲಿ ಕಾಣಿಸಿಕೊಂಡ ರೀತಿ ರೈತನ ಮುಖದಲ್ಲಿ ಹರ್ಷ ಮೂಡುವಂತೆ ಆಯಿತು. ಉತ್ತಮ ಫಸಲು ಕೈಗೆ ಸಿಗುವ ನಿರೀಕ್ಷೆ ಇದೆ ಎಂದು ರೈತ ಭಾವಿಸಿದ ಸಾಲ ಸೋಲ ಮಾಡಿ ರೈತ ಎರಡು ಬಾರಿ ಔಷಧಿಗಳನ್ನು ಮರಗಳಿಗೆ ಸಿಂಪಡಿಸಿ ಇರುವ ಹೂವು ಪಿಂದೆ ಆಗಬೇಕೆಂದು ಜೋಪಾನವಾಗಿ ಕಾಪಾಡಿಕೊಂಡ.
ಕಳೆದ ಒಂದು ವಾರದಿಂದ ಶೇ.೭೦ ರಷ್ಟು ಮರಗಳಲ್ಲಿ ಹೂವಿನ ಜೊತೆಗೆ ಚಿಗುರು ಕಾಣಿಸಿಕೊಂಡಿದೆ. ಚಿಗುರನ್ನು ತಿನ್ನಲು ಜಿಗಿಹುಳ ಕಾಣಿಸಿಕೊಳ್ಳುತ್ತಿವೆ. ಚಿಗುರು ತಿಂದ ನಂತರ ಮಾವಿನ ಪಿಂದೆಯ ಮೇಲಿನ ಹಸಿರನ್ನೂ ಸಹ ತಿನ್ನುವುದರಿಂದ ಪಿಂದೆ ಹಳದಿ ಬಣ್ಣ ಬಂದು ಉದುರಲು ಪ್ರಾರಂಭಿಸುತ್ತದೆ ಎಂಬುದು ರೈತರ ಅಳಲಾಗಿದೆ.
ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡು ನಂತರ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಹೂವು ಕಾಣಿಸಿಕೊಳ್ಳುತ್ತದೆ. ಈ ವರ್ಷ ಒಂದು ತಿಂಗಳು ತಡವಾಗಿ ಹೂವು ಕಾಣಿಸಿಕೊಂಡು ಫೆಬ್ರವರಿ ತಿಂಗಳಲ್ಲಿಯೂ ಹೂವು ಕಾಣಿಸಿಕೊಂಡಿತ್ತು.
ಇನ್ನೇನು ಹೂವು ಉದುರಿ ಮಾವಿನ ಪಿಂದೆಯಾಗುವ ಸಂದರ್ಭದಲ್ಲಿ ಕೆಲವು ಮರಗಳಲ್ಲಿ ಚಿಗುರು ಕಾಣಿಸಿಕೊಳ್ಳುತ್ತಿದೆ. ಪಿಂದೆಗೆ ಸಿಗಬೇಕಾಗಿದ್ದ ಎನರ್ಜಿ ಮಾವಿನ ಚಿಗುರಿಗೆ ಹೋಗುತ್ತಿರುವುದರಿಂದ ಹೂವು ಪಿಂದೆಯಾಗುವುದಕ್ಕಿAತ ಉದುರುವುದೇ ಹೆಚ್ಚಾಗಿದೆ. ಇದ್ದ ಪಿಂದೆಯೂ ಜಿಗಿಹುಳ ಕಾಟದಿಂದ ಹಳದಿ ಬಣ್ಣಕ್ಕೆ ಬಂದು ಉದುರುತ್ತವೆ ಎಂಬ ಭೀತಿ ರೈತರನ್ನು ಕಾಡುತ್ತಿದೆ.
ಬಾಕ್ಸ್
ತೋತಾಪುರಿ, ನೀಲಂ ಹೊರತುಪಡಿಸಿ ಉಳಿದ ಎಲ್ಲಾ ಜಾತಿಯ ಮಾವಿನ ಮರಗಳ ಫಸಲಿನ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ. ಮಲ್ಲಿಕಾ ಮತ್ತು ಬಾದಾಮಿ ಮುಂತಾದ ತಳಿಗಳ ಮರಗಳಲ್ಲಿ ಜಿಗಿಹುಳ ಹೆಚ್ಚಾಗಿ ಕಾಡತೊಡಗುತ್ತದೆ. ಪ್ರಾರಂಭದಲ್ಲಿಯೇ ಔಷಧಿ ಸಿಂಪಡಣೆ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದಾಗಿದೆ. ಔಷಧಿ ಹೊರೆ ರೈತನಿಗೆ ಆಗಬಹುದು. ಸರ್ಕಾರ ರಿಯಾಯಿತಿ ದರದಲ್ಲಿ ಔಷಧಿಗಳನ್ನು ರೈತರಿಗೆ ಒದಗಿಸುವ ಕೆಲಸ ಮಾಡಬೇಕೆಂದು ರೈತರ ಒತ್ತಾಯ
ಕೋಟ್
ಪ್ರಾರಂಭದಲ್ಲಿ ಮರಗಳಲ್ಲಿ ಹೂವು ಕಾಣಿಸಿಕೊಂಡ ರೀತಿ ನೋಡಿದಾಗ ಉತ್ತಮ ಫಸಲು ಬರುತ್ತದೆಂಬ ನಿರೀಕ್ಷೆ ಇತ್ತು. ಆದರೆ ಮರಗಳಲ್ಲಿ ಹೂವಿನ ಜೊತೆಗೆ ಚಿಗುರು ಕಾಣಿಸಿಕೊಂಡಿರುವುದರಿAದ ಜಿಗಿಹುಳ ಕಾಟದ ಜೊತೆಗೆ ಪಿಂದೆ ಉದುರುವ ಭೀತಿಯೂ ಇದೆ. ಉಷ್ಣಾಂಶ ಹೆಚ್ಚಾಗಿರುವುದರಿಂದ ಮಾವಿನ ಪಿಂದೆಗೆ ಸಿಗಬೇಕಾಗಿದ್ದ ಎನರ್ಜಿ ಚಿಗುರಿಗೆ ಸಿಗುವಂತಾಗಿದೆ. ರೈತರು ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳ ಹಾಗೂ ತಜ್ಞರ ಮಾಹಿತಿ ಪಡೆದು ಮತ್ತೊಂದು ಬಾರಿ ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ. ಪ್ರಕೃತಿಗೆ ಯಾರೂ ಹೊಣೆಗಾರರಲ್ಲ. ಶೇ.೪೦ ರಿಂದ ೫೦ ರಷ್ಟು ಫಸಲು ಮಾತ್ರ ಈ ವರ್ಷ ಸಿಗುವ ನಿರೀಕ್ಷೆ ಇದೆ.
-ಡಾ.ರಾಜಾರೆಡ್ಡಿ, ಪ್ರಗತಿಪರ ರೈತರು
ಕೋಟ್
ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡಿರುವುದರಿAದ ಜಿಗಿಹುಳ ಕಾಟ ಇದ್ದೇ ಇರುತ್ತದೆ. ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲೇಬೇಕಾಗುತ್ತದೆ. ಚಿಗುರಿನ ಜೊತೆಗೆ ಹೂವು ಇದೆ. ಎನರ್ಜಿ ಚಿಗುರಿಗೆ ಹೋಗುತ್ತಿರುವುದರಿಂದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ನೀರು ಇರುವವರು ಮರಗಳಿಗೆ ನೀರು ನೀಡುವುದರ ಮೂಲಕ ಶಕ್ತಿ ಕೊಡಬೇಕಾಗುತ್ತದೆ. ಪ್ರಕೃತಿಗೆ ಹೊಂದಿಕೊಳ್ಳಲೇಬೇಕಾಗುತ್ತದೆ.
-ಬೈರಾರೆಡ್ಡಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶ್ರೀನಿವಾಸಪುರ.
ಚಿತ್ರ ೦೮ ಕೆ.ಎಲ್.ಆರ್. ೦೧ : ಮಾವಿನ ಮರಗಳಲ್ಲಿ ಹೂವಿನ ಜೊತೆಗೆ ಚಿಗುರು ಕಾಣಿಸಿಕೊಂಡಿದೆ.
ಚಿತ್ರ ೦೮ ಕೆ.ಎಲ್.ಆರ್. ೦೧ಎ : ಡಾ.ರಾಜಾರೆಡ್ಡಿ, ಪ್ರಗತಿಪರ ರೈತನ ಭಾವಚಿತ್ರ
ಚಿತ್ರ ೦೮ ಕೆ.ಎಲ್.ಆರ್. ೦೧ಬಿ : ಬೈರಾರೆಡ್ಡಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶ್ರೀನಿವಾಸಪುರ. ಭಾವಚಿತ್ರ