ಮಾರ್ಷಲ್ ಆರ್ಟ್‌ಗೆ ಎಂಟು ಸ್ಪರ್ಧಿಗಳು ಆಯ್ಕೆ

karate-athlete-with-red-belt-posing-closeup_23-2148990932
Published on

ಓಶೋಕೈ ಮಾರ್ಷಲ್ ಆರ್ಟ್ ಅಕಾಡೆಮಿಯ ಎನ್.ಸಂತೋಷ್ ಕುಮಾರ್, ಆರ್.ದೀಪಿಕಾ, ಜಿ.ಆರ್.ಕರಣ್ ಥಾಯ್‌ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯಲಿರುವ 7ನೇ ಅಂತಾರಾಷ್ಟ್ರೀಯ ಥಾಯ್ ಮಾರ್ಷಲ್ ಆರ್ಟ್ ಗೇಮ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಅಕಾಡೆಮಿಯ ಮುಖ್ಯ ತರಬೇತುದಾರ ಎಸ್.ಕೃಷ್ಣಮೂರ್ತಿ ತಿಳಿಸಿದರು.

ರಾಜ್ಯದ ಒಟ್ಟು ಎಂಟು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸಂತೋಷ್ 2004ರಲ್ಲಿ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅದೇ ಸ್ಪರ್ಧೆಯಲ್ಲಿ ಕರಣ್ ಕಂಚಿನ ಪದಕ ಪಡೆದಿದ್ದರು. ಮಹಿಳಾ ವಿಭಾಗದಲ್ಲಿ ದೀಪಿಕಾ ಚಿನ್ನದ ಪದಕ ಪಡೆದು ಮೂವರೂ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ವಿದ್ಯಾರ್ಥಿಗಳಾದ ಆರ್.ಚಂದ್ರು, ಸಂತೋಷ್ ಕುಮಾರ್, ದೀಪಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net