ಮಾರನಾಳದಲ್ಲಿ ಜೀವಜಲಕ್ಕಿಲ್ಲ ರಕ್ಷಣೆ

Published on

ಕೊಡೇಕಲ್ : ವಲಯದ ಮಾರನಾಳ ಗ್ರಾಮದ ವಿವಿಧ ವಾರ್ಡ್ಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಿದ ನಳಗಳಿಗೆ ಸಮರ್ಪಕ ವಾಲ್ ಇಲ್ಲದ ಕಾರಣ ನೀರು ದಿನದ ಮೂರು ಗಂಟೆಗೂ ಹೆಚ್ಚು ಕಾಲ ಪೋಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ನೀರಿನ ಸದ್ಬಳಕೆಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಅಲ್ಲದೆ ಜೀವಜಲ ರಕ್ಷಣೆಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದರೂ ಕೆಲ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದರೆ ಮಾರನಾಳದಲ್ಲಿ ಗ್ರಾಪಂನ ನಿರ್ಲಕ್ಷÈದಿಂದ ದಿನದ ಮೂರು ತಾಸು ನೀರು ಪೋಲಾಗುತ್ತಿರುವುದಕ್ಕೆ ಗ್ರಾಮಸ್ಥರು ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ವಿವಿಧ ವಾರ್ಡ್ಗಳಲ್ಲಿ ಅಳವಡಿಸಿದ ನಳಗಳಿಗೆ ಯಾವುದೇ ರೀತಿಯ ವಾಲ್ ಅಳವಡಿಸದ ಕಾರಣ ನಿತ್ಯ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಬೆಳಗ್ಗೆ ೬ರಿಂದ ೯ರವರೆಗೂ ಸತತವಾಗಿ ಜೀವಜಲ ಪೋಲಾಗುತ್ತಿದೆ. ಹೀಗಾಗಿ ಕೂಡಲೇ ಇಂತಹ ನಳಗಳನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅವುಗಳಿಗೆ ವಾಲ್ ಅಳವಡಿಸಬೇಕು ಎಂದು ಒತ್ತಾಯಿಸಿದರು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಗ್ರಾಪಂ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net