ಮಾನವನ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಪ್ರಮುಖ: ವಿನಯ್ ಗೂರೂಜಿ

vinay guruji
Published on

ಬೆಂಗಳೂರು: ಮಾನವನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಗೌರಿ ಗದ್ದೆಯ ಅವಧೂತ ವಿನಯ್ ಗೂರೂಜಿ ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಯಲ್ ಎನ್‌ಸ್ಪೋ ವರ್ಲ್ಡ್ ಥೀಮ್ ಪಾರ್ಕ್‌ನ ಲೋಗೊ ಬಿಡುಗಡೆ ಮಾಡಿ ಮಾತನಾಡಿದರು.
ಬಾಲ್ಯವನ್ನು ನೆನೆಪಿಸುವಂತಹ ಗ್ರಾಮೀಣ ಕ್ರೀಡೆಗಳು, ಕ್ರೀಡಾಂಗಣದ ಆಟಗಳು ಹಾಗೂ ಸಾಂಪ್ರದಾಯಿಕ ಸಾಂಸ್ಕೃತಿಕ ಚಟುವಟಿಕೆಗಳು ಒಂದೇ ಸ್ಥಳದಲ್ಲಿ ದೊರಕುವಂತಹ ವ್ಯವಸ್ಥೆ ಒಳ್ಳೆಯ ಬೆಳವಣಿಗೆ. ಬೆಂಗಳೂರಿನ ಹೊರವಲಯದಲ್ಲಿ 100ಕ್ಕೂ ಹೆಚ್ಚು ಗ್ರಾಮೀಣ ಕ್ರೀಡೆಗಳು, 20 ಕ್ಕೂ ಹೆಚ್ಚು ಸಾಹಸಾತ್ಮಕ ಕ್ರೀಡೆಗಳು ಹಾಗೂ ಭಾರತೀಯ ಮತ್ತು ವಿದೇಶಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೊಂದುವ ಪಾರ್ಕ್‌ನ್ನು ಶೇಖರ್ ಗ್ಲೋಬಲ್ ರಿಟ್ರೀಟ್ಸ್ ಸಂಸ್ಥೆಯ ನಿರ್ಮಿಸುತ್ತಿರುವುದು ಬಹಳ ಸಂತಷ ತಂದಿದೆ ಎಂದರು.

ಒಂದೇ ಸೂರಿನಡಿ 400 ಕ್ಕೂ ಹೆಚ್ಚು ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಲ್ಲ ವಯೋಮಾನದರೂ ಭಾಗವಹಿಸಬಹುದು. ಈ ಥೀಮ್ ಪಾರ್ಕ್ ಎಲ್ಲ ವರ್ಗದ ಜನರಿಗೆ ಉಪಯೋಗಿಸಲು ಇಷ್ಟಪಡುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ಪಾರ್ಕ್‌ನಲ್ಲಿ ವಿಆರ್ ಗೇಮ್‌ಗಳು, ರಂಗ ಹಾಗೂ ಜಾನಪದ ಚಟುವಟಿಕೆಗಳು ಕಾಣಬಹುದು ಎಂದು ಶೇಖರ್ ಗ್ಲೋಬಲ್ ರಿಟ್ರೀಟ್ಸ್ ಸಂಸ್ಥೆಯ ಎಂಡಿ ಶೇಖರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net