ಮಾದಿಗ ಸಂಘಟನೆಗಳ ಪ್ರತಿಭಟನೆ

29 KRN-1-
Published on

ಕೆ.ಆರ್.ನಗರ: ನ್ಯಾಯಮೂರ್ತಿ ಎ.ಜೆ.ಸದಾಶಿದ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಗುರುವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.


ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಎಂ.ಲೋಕೇಶ್ ಮಾತನಾಡಿ, ಮಾದಿಗ ಜನಾಂಗವು ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು ಶೋಷಿತರಲ್ಲಿ ಶೋಷಿತರಾಗಿದೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗ ರಾಜ್ಯಾದ್ಯಂತ ಸಂಚರಿಸಿ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ್ದು, ಇನ್ನೂ ವರದಿಗೆ ಜಾರಿಗೆ ಯಾವ ಸರ್ಕಾರಗಳೂ ಮುಂದಾಗಿಲ್ಲ. ರಾಜ್ಯ ಸರ್ಕಾರ ವರದಿ ಅನುಷ್ಠಾನ ಮಾಡದೆ ನಿರ್ಲಕ್ಷೃ ಮಾಡುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾರಿಗೊಳಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕು ಎಂದರು.


ನಂತರ ತಹಸೀಲ್ದಾರ್ ಎಸ್.ಸಂತೋಷ್‌ಗೆ ಮನವಿ ಸಲ್ಲಿಸಿದರು. ದಸಂಸ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ತಾಲೂಕು ಸಂಚಾಲಕ ಎಂ.ಎಸ್.ಮಲ್ಲೇಶ್, ಮಾದಿಗ ದಂಡೋರ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಸ್.ನಂಜುಂಡಸ್ವಾಮಿ, ಅಖಿಲ ಭಾರತ ಜೈ ಭೀಮ್ ಸಂಘಟನೆ ತಾಲೂಕು ಅಧ್ಯಕ್ಷ ಚಂದ್ರ, ಜಿಲ್ಲಾ ಕಾರ್ಯದರ್ಶಿ ರಮೇಶ್, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ಎಸ್.ರವಿಕುಮಾರ, ಬಿಎಸ್‌ಪಿ ತಾಲೂಕು ಉಪಾಧ್ಯಕ್ಷ ಈರಯ್ಯ, ಮುಖಂಡರಾದ ಕೆಂಪಯ್ಯ, ಮುರುಗೇಶ್, ಕರ್ಣಕುಮಾರ್, ಹಂಪಾಪುರ ಸುರೇಶ್, ತಿರುಮಲ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net