ಕಂಪಲಾಪುರ: ಶೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮದ ಶ್ರೀಕರಕಂಠೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.
ದೇವರಿಗೆ ಅಭಿಷೇಕ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ಸೋಮಶೇಖರ್ ಮಾತನಾಡಿ, ಮಾದಕ ವಸ್ತುಗಳು ಮನುಷ್ಯರಿಗೆ ಮಾರಕವಾಗುತ್ತವೆ. ಅವುಗಳ ಬಳಕೆಯಿಂದ ಜೀವಕ್ಕೆ ಕುತ್ತು ಬರುತ್ತದೆ. ಆದ್ದರಿಂದ ಅಂತಹ ಸನ್ನಿವೇಶ ಕಂಡುಬಂದಲ್ಲಿ ನಿಯಂತ್ರಣಕ್ಕೆ ತಿಳಿಹೇಳಬೇಕು, ಜತೆಗೆ ಮಕ್ಕಳಿಗೆ ಆ ಬಗ್ಗೆ ಮಾಹಿತಿ ನೀಡಬೇಕು ಎಂದರು.
ತಾಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶೀಲಾ ಮಂಜು, ಚೈತನ್ಯ ಒಕ್ಕೂಟದ ಅಧ್ಯಕ್ಷೆ ತೇಜಾವತಿ, ವಲಯ ಮೇಲ್ವಿಚಾರಕಿ ರವಿಕಲಾ ಶೆಟ್ಟಿ ಹಾಗೂ ಸೇವಾ ಪ್ರತಿನಿಧಿಗಳು, ಸದಸ್ಯರು ಹಾಜರಿದ್ದರು.