

ನಟ ಮಯೂರ್ ಕಡಿ ಮತ್ತು ನಟಿ ಅಪೂರ್ವ ಆರಾಧ್ಯ ಅಭಿನಯದ ‘ಮಾತೊಂದ ಹೇಳುವೆ’ ರಾಜ್ಯಾದ್ಯಂತ ಬಿಡುಗಡೆಗೊಡಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಸ್ವತಃ ನಟ ಮಯೂರ್ ಕಡಿ ತಿಳಿಸಿದರು.
ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರದ ಕಥೆಯಲ್ಲಿ ನಾಯಕ ಉತ್ತರ ಕರ್ನಾಟಕದ ರೇಡಿಯೋ ಜಾಕಿ(ಆರ್‌ಜೆ) ಆಗಿರುತ್ತಾನೆ. ನಾಯಕಿ ಮೈಸೂರಿನಿಂದ ಧಾರವಾಡಕ್ಕೆ ಆಗಮಿಸುತ್ತಾಳೆ. ಇಬ್ಬರೂ ಭೇಟಿ ಆದಾಗ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರ. ಇದೊಂದು ವಿಭಿನ್ನ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟಿ ಅಪೂರ್ವ ಆರಾಧ್ಯ, ಚಿತ್ರ ಬಳಗದ ಶರಣ್, ಅರುಣ್, ಉಮೇಶ್, ದಿನೇಶ್ ಇತರರಿದ್ದರು.