

ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ಪ್ರೀತಿ ತಾಯಿಯದು ಮಾತ್ರ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ವತಿಯಿಂದ ನಗರದ ವಿಜಯನಗರದ ಕಸಾಪ ಭವನದಲ್ಲಿ ಅಮ್ಮನ ದಿನಾಚರಣೆಯ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ‘ಅಮ್ಮನ ಮಡಿಲ ಕವಿತೆಗಳು ಮಾತಾಡುತಾವ’ ಎಂಬ ರ‌್ಯಾಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಶ್ರೇಯೋಭಿವೃದ್ಧಿಗೆ ತ್ಯಾಗಿಯಾಗಿ ಪ್ರೀಯಿಯನ್ನು ಅಭಿವ್ಯಕ್ತಗೊಳಿಸುವ ತಾಯಿಯನ್ನು ಪಡೆದ ಮಕ್ಕಳು ಧನ್ಯರು. ಎಲ್ಲರಿಗೂ ತಾಯಿ ಋಣ ದೊಡ್ಡದು. ತಾಯಿಯನ್ನು ಎಂದೂ ಮರೆಯಬಾರದು ಎಂದರು.
ಸಾಹಿತಿ ಪ್ರೊ.ಕೆ.ಆರ್.ಪ್ರೇಮಲೀಲಾ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಾಧ್ಯಾಪಕಿ ಡಾ.ಎಚ್.ಎಂ.ಹೇಮಲತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಹಾಲಪ್ಪಗೌಡ ಇತರರಿದ್ದರು.