ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

Hong Kong sixes
Published on

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ತನ್ನ ಕಂಪನಿಯ ಉದ್ಯೋಗಿಗಳಿಗೆ ಪಿಎಫ್ (ಭವಿಷ್ಯ ನಿಧಿ) ವಿಚಾರದಲ್ಲಿ ವಂಚಿಸಿರುವ ಆರೋಪ ಉತ್ತಪ್ಪ ವಿರುದ್ಧ ಕೇಳಿಬಂದಿದೆ.

ಈ ಬಗ್ಗೆ ದೂರು ದಾಖಲಾಗಿದ್ದು, ಉತ್ತಪ್ಪ ಡಿ.೨೭ರ ಒಳಗಾಗಿ ೨೪ ಲಕ್ಷ ರೂ. ಹಣ ಪಾವತಿಸಬೇಕಾಗಿದೆ. ಇಲ್ಲವೆ ಬಂಧನಕ್ಕೊಳಗಾಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.

೩೯ ವರ್ಷದ ರಾಬಿನ್ ಉತ್ತಪ್ಪ ಬೆಂಗಳೂರು ಮೂಲದ ಸೆಂಟಾರಸ್ ಲೈಫ್ ಸ್ಟೈಲ್ ಬ್ರಾೃಂಡ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯೊಂದಕ್ಕೆ ನಿರ್ದೇಶಕರಾಗಿದ್ದಾರೆ. ಈ ಕಂಪನಿಯ ಉದ್ಯೋಗಿಗಳ ಸಂಬಳದಲ್ಲಿ ಪಿಎಫ್ ಹಣ ಕಡಿತವಾಗುತ್ತಿದೆ. ಆದರೆ, ಆ ಹಣ ಅವರವರ ಪಿಎಫ್ ಖಾತೆಯಲ್ಲಿ ಜಮೆಯಾಗುತ್ತಿಲ್ಲ. ಹೀಗಾಗಿ ಕಂಪನಿ ೨೩,೩೬,೬೦೨ ರೂ.ನಷ್ಟು ಹಣವನ್ನು ಪಾವತಿಸಲು ವಿಫಲವಾಗಿದೆ. ಆದ್ದರಿಂದ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸುವಂತೆ ಪ್ರಾದೇಶಿಕ ಪಿಎಫ್ ಅಧಿಕಾರಿಯಾದ ಷಡಕ್ಷರ ಗೋಪಾಲರೆಡ್ಡಿ, ಪುಲಕೇಶಿನಗರ ಪೊಲೀಸರಿಗೆ ಡಿ.೪ರಂದೇ ನಿರ್ದೇಶಿಸಿದ್ದಾರೆ. ಆದರೆ, ಅರೆಸ್ಟ್ ವಾರೆಂಟ್‌ನಲ್ಲಿ ದಾಖಲಾಗಿರುವ ವಿಳಾಸವಾದ ಬೆಂಗಳೂರಿನಲ್ಲಿ ಉತ್ತಪ್ಪ ಸದ್ಯ ವಾಸವಿಲ್ಲ. ಅವರು ಕಳೆದ ೧ ವರ್ಷದಿಂದ ದುಬೈಯಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net