ಮಾಂಸದಂಗಡಿ ಮಾಲೀಕನ ಮೇಲೆ ತಲವಾರು ದಾಳಿ

Published on

ಮಂಗಳೂರು: ನಗರದ ಹೊರ ವಲಯದ ತೊಕ್ಕೊಟ್ಟು ಒಳ ಪೇಟೆಯಲ್ಲಿ ಮಾಂಸದಂಗಡಿ ಮಾಲೀಕನ ಮೇಲೆ ಗುರುವಾರ ತಡ ರಾತ್ರಿ ತಲವಾರು ದಾಳಿ ನಡೆದಿದೆ.

ಮಾಂಸದಂಗಡಿ ಮಾಲೀಕ ನಝೀರ್ (47) ತಲವಾರು ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ತೊಕ್ಕೊಟ್ಟು ಒಳ ಪೇಟೆಯಲ್ಲಿ ಪಾನ್ ಬೀಡ ತಿನ್ನಲು ಹೋಗಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ. ದೇಹದ ಕೈ, ಕುತ್ತಿಗೆ, ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ.

ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net