ಮಾ.3ರಿಂದ

ctd 2 DHO dr g.p.renuprasad--00003
Published on

ಚಿತ್ರದುರ್ಗ:ಜಿಲ್ಲಾದ್ಯಂತ ಮಾ.3ರಿಂದ 6ವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ 3ರಂದು ಬೆಳಗ್ಗೆ 8ಗಂಟೆಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ಸಿಗಲಿದೆ. 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಈ ಹಿಂದೆ ಎಷ್ಟು ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ 3 ರಂದು ಎಲ್ಲ ಲಸಿಕೆ ಹಾಕಲಾಗತ್ತದೆ.
ಜಿಲ್ಲೆಯಲ್ಲಿ 135105 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಇದಕ್ಕಾಗಿ ಎಲ್ಲ ಆಸ್ಪತ್ರೆ,ಅಂಗನವಾಡಿಗಳಲ್ಲಿ 1084 ಬೂತ್‌ಗಳನ್ನು ಸಿದ್ಧಪಡಿಸಲಾಗಿದೆ. 4ರಿಂದ 6ರವರೆಗೆ ಮನೆ,ಮನೆಗೆ ಭೇಟಿ ನೀಡಿ ಅರ್ಹ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಹೈರಿಸ್ಕ್ ಏರಿಯಾಗಳಲ್ಲಿ ಲಸಿಕೆ ಹಾಕಲು 15 ಮೊಬೈಲ್ ತಂಡಗಳನ್ನು ರಚಿಸಲಾಗಿದೆ. ಬಸ್‌ನಿಲ್ದಾಣ,ಸಂತೆ, ಜಾತ್ರೆ,ರೈಲ್ವೆ ಸ್ಟೇಷನ್ ಮತ್ತಿತರ ಜನ ದಟ್ಟಣೆ ಪ್ರದೇಶಗಳ ಸಹಿತ 1152 ತಂಡಗಳಿಂದ ಲಸಿಕೆ ಹಾಕಲಾಗುತ್ತದೆ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net