

ಚಿತ್ರದುರ್ಗ: ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ 94ನೇ ಮಹಾಶಿವರಾತ್ರಿ ಮಹೋತ್ಸವದ ಅಧ್ಯಕ್ಷರನ್ನಾಗಿರನ್ನು ಚಳ್ಳಕೆರೆ ನಗರಸಭಾ ಸ ದಸ್ಯ ಕೆ.ಸಿ.ನಾಗರಾಜ್ ಅವರು ನೇಮಕವಾಗಿದ್ದಾರೆ.
ಶ್ರೀ ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹಾಗೂ ಶಿವಶರಣ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಸಾನ್ನಿಧ್ಯ ಆಶ್ರಮದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆ ನಾಗರಾಜ್ ಅವರ ಆಯ್ಕೆ ಹಾಗೂ ಮಾರ್ಚ್2 ರಿಂದ 8ರವರೆಗೆ ನಡೆಯಲಿದೆ ಎಂದು ಉಭಯ ಶ್ರೀಗಳು ಪ್ರಕಟಿಸಿದರು.
ಮಹಾ ಶಿವರಾತ್ರಿ ಮಹೋತ್ಸವ ಮಧ್ಯಕರ್ನಾಟಕದ ನಾಡ ಹಬ್ಬವನ್ನಾಗಿ ಆಚರಿಸ ಬೇಕಿದೆ ಎಂದು ಮಾದಾರ ಶ್ರೀಗಳು ಹೇಳಿದರು. ನಾಡಿನ,ಬೇರೆ ಬೇರೆ, ಮಠಗಳು ವಿವಿಧ ಕಾರ‌್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು,ಆಶ್ರಮದಿಂದ ಏರ್ಪಡಿಸುವ ಈ ಮ ಹೋತ್ಸವವೂ ಅತ್ಯಂತ ಸಡಗರದಿಂದ ನಡೆಸಿಕೊಂಡು ಬರಲಾಗಿದೆ. ಈ ಉತ್ಸವವವನ್ನು ನಾಡಹಬ್ಬವನ್ನಾಗಿ ಇನ್ನೂ ಚೆನ್ನಾಗಿ ಆಚರಿಸಬೇಕಿದೆ ಎಂದರು.
ಆರಂಭದಲ್ಲಿ ಚಿಕ್ಕದಾಗಿದ್ದ ಉತ್ಸವ ನಂತರದಲ್ಲಿ ರಾಜ್ಯಮಟ್ಟಕ್ಕೆ ಬೆಳೆಯುತ್ತಿದೆ. ವೈಚಾರಿಕ ತತ್ವಗಳು,ಶಿವನಾಮ ಸ್ತೋತ್ರಗಳು ಭಾರತದ ಸನಾತನ ಧರ್ಮ ಹಾಗೂ ಪ್ರಗತಿಪರ ಚಿಂತನೆಗಳಿಗೆ ಶಿವಾಲಿಂಗಾನಂದ ಶ್ರೀಗಳು ಉತ್ಸವ ಏರ್ಪಡಿಸುವ ಮೂಲಕ ವೇದಿಕೆ ನೀಡಿದ್ದಾರೆ. ಉತ್ಸವದ ಅಧ್ಯಕ್ಷರಾಗಿ ಅನೇಕ ಗಣ್ಯರು ಕೆಲಸ ಮಾಡಿದ್ದಾರೆ. ನಾವೆಲ್ಲರೂ ಉತ್ಸವದ ಯಶಸ್ಸಿಗೆ ಸಹಕಾರ ನೀಡಬೇಕಿದೆ ಎಂದರು.
ಶಿವಲಿಂಗಾನಂದ ಶ್ರೀಗಳು ಮಾತನಾಡಿ,ಉತ್ಸವದ ಯಶಸ್ಸಿಗೆ ಅನೇಕರು ವಿವಿಧ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಆಧರಿಸಿ ಉತ್ಸವದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಆಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್ ಮಾತನಾಡಿ,93ನೇ ಮಹೋತ್ಸವಕ್ಕೆ 22 ಲಕ್ಷ ರೂ.ವೆಚ್ಚವಾಗಿದ್ದು ಈ ಬಾರಿಯ ಮ ಹೋತ್ಸವಕ್ಕೆ 25 ಲಕ್ಷ ರೂ.ನಿಗದಿಪಡಿಸಲಾಗಿದೆ ಎಂದರು. ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕೆ.ಎಂ.ವಿರೇಶ್,ಕುಡಾ ಮಾಜಿ ಬ ದ್ರಿನಾಥ್,ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್ ಮಾತನಾಡಿದರು.
ನಗರಸಭಾ ಸದಸ್ಯ ವೆಂಕಟೇಶ್,ನಂದಿನಾಗರಾಜ್,ಓಂಕಾರ್,ಗೋಪಾಲಸ್ವಾಮಿನಾಯ್ಕಾ,ನಿರಂಜನಮೂರ್ತಿ,ರಾಮಪ್ಪ,ಪ್ರೊ.ಬಿ.ರಾಜ ಶೇಖರಪ,್ಪ ಮಂಜುನಾಥ್‌ಗುಪ್ತ,ವೆಂಕಟೇಶ್,ರಾಮಮೂರ್ತಿ ಮತ್ತಿತರರು ಇದ್ದರು.