ಮಹಿಳೆಯರು ಆರ್ಥಿಕ ಸಬಲರಾಗಲಿ

3sri-1 santhe
ಶೃಂಗೇರಿಯ ವೈಕುಂಠಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಹೇಮಾವತಿ ಉದ್ಘಾಟಿಸಿದರು. ಆದರ್ಶ, ಕಲಾವತಿ, ನಂದಿನಿ, ಚೈತ್ರಾ ಇದ್ದರು.
Published on

ಶೃಂಗೇರಿ: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವ ಅನಿವಾರ್ಯತೆ ಹೆಚ್ಚಿದೆ. ಕೌಟುಂಬಿಕ ನಿರ್ವಹಣೆಗಾಗಿ ಆಕೆ ಆರ್ಥಿಕವಾಗಿ ಸಬಲಳಾಗಬೇಕು ಎಂದು ಕುತುಗೋಡು ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಹೇಮಾವತಿ ತಿಳಿಸಿದರು.

ವೈಕುಂಠಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಜೀವಿನಿ ಒಕ್ಕೂಟ, ತಾಪಂ, ಜಿಪಂ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮನೆಯಲ್ಲಿ ಹಪ್ಪಳ, ಸಾಂಬಾರು ಪದಾರ್ಥಗಳು, ಉಪ್ಪಿನಕಾಯಿ, ಸಿಹಿ ತಿನಿಸುಗಳನ್ನು ತಯಾರಿಸಬಹುದು. ದಿನಬಳಕೆ ವಸ್ತುಗಳ ಜತೆ ಗೃಹಲಂಕಾರ ವಸ್ತುಗಳನ್ನು ಮಾರಾಟ ಮಾಡಬಹುದು. ತಯಾರಿಸಲಾದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯ ವ್ಯವಸ್ಥೆಗೆ ಸಂಜೀವಿನಿ ಯೋಜನೆಯಿಂದ ನಿರಂತರ ಪ್ರೋತ್ಸಾಹ ನೀಡಲಾಗುವುದು ಎಂದರು.

ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಗಳು ಸಂತೆಯಲ್ಲಿದ್ದವು. ತಾಪಂ ಇಒ ಸುದೀಪ್, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ ಆದರ್ಶ, ಚೈತ್ರಾ, ಪವಿತ್ರಾ, ಒಕ್ಕೂಟದ ಪದಾಧಿಕಾರಿಗಳಾದ ನಂದಿನಿ, ಕಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net