ಮಹಿಳೆಯರಿಗೆ ಸ್ವಉದ್ಯೋಗದಿಂದ ಆರ್ಥಿಕ ಬಲ

5 nrp 1holige
ಎನ್.ಆರ್.ಪುರ ರೇಣುಕಾ ಗಾಮೆರ್ಂಟ್ಸ್‌ನಲ್ಲಿ ಹೊಲಿಗೆ ತರಬೇತಿ ಸಮಾರೋಪದಲ್ಲಿ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು. ದೇವರಾಜ್, ಪ್ರಭಾವತಿ, ಶೋಭಾ, ಸಿದ್ದಲಿಂಗಪ್ಪ, ಭಾನುಮತಿ, ವಿಮಲಾ, ಸುನೀತಾ, ವೀಣಾ, ಶಶಿಕಲಾ ಇದ್ದರು.
Published on

ಎನ್.ಆರ್.ಪುರ: ಮಹಿಳೆಯರು ಸ್ವಉದ್ಯೋಗ ಮಾಡಿದರೆ ಕುಟುಂಬದ ಆರ್ಥಿಕ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯಾ ನಂಜುಂಡಸ್ವಾಮಿ ತಿಳಿಸಿದರು.

ಪಟ್ಟಣದ ರೇಣುಕಾ ಗಾಮೆರ್ಂಟ್ಸ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗಾಗಿ ಏರ್ಪಡಿಸಿದ್ದ ಹೊಲಿಗೆ ತರಬೇತಿ ಸಮಾರೋಪದಲ್ಲಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಅವಶ್ಯಕವಾಗಿದೆ. ಮಾರುಕಟ್ಟೆಯಲ್ಲಿ ಟೈಲರಿಂಗ್ ಉದ್ಯೋಗಕ್ಕೆ ಹೆಚ್ಚು ಬೇಡಿಕೆ ಇದೆ. ಮಹಿಳೆಯರು ತಾಳ್ಮೆ, ನಿಪುಣತೆ ಹಾಗೂ ಶ್ರದ್ಧೆಯಿಂದ ಹೊಲಿಗೆ ಕಾರ್ಯ ಮುಂದುವರಿಸಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.

ರೇಣುಕಾ ಗಾಮೆರ್ಂಟ್ಸ್ ಮಾಲೀಕ ದೇವರಾಜ್ ಮಾತನಾಡಿ, ಹೊಲಿಗೆ ತರಬೇತಿ ಪಡೆದುಕೊಂಡವರು ಸ್ವಉದ್ಯೋಗ ಆರಂಭಿಸಿ ಜೀವನದಲ್ಲಿ ಸಫಲರಾಗಬಹುದು. ಇತರರಿಗೆ ಮಾದರಿಯಾಗುವಂತೆ ಜೀವನ ಮಾಡಬೇಕು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಹಾಯವಾಗುವಂತೆ ಉಚಿತವಾಗಿ 90 ದಿನಗಳ ಹೊಲಿಗೆ ತರಬೇತಿ ನೀಡಲಾಗಿತ್ತು. ತರಬೇತಿ ಪಡೆದ 30 ಮಹಿಳೆಯರಿಗೆ ಪ್ರಮಾಣಪತ್ರ ನೀಡಲಾಯಿತು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎನ್.ಆರ್.ಪುರ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ, ಗ್ರಾಪಂ ಮಾಜಿ ಅಧ್ಯಕ್ಷೆ ಶೋಭಾ, ಯೋಜನೆ ವಲಯ ಮೇಲ್ವಿಚಾರಕ ಸಿದ್ದಲಿಂಗಪ್ಪ, ಸೇವಾ ಪ್ರತಿನಿಧಿಗಳಾದ ಭಾನುಮತಿ, ವಿಮಲಾ, ಸುನೀತಾ, ವೀಣಾ, ಶಶಿಕಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net