

ಎಂಟನೇ ಬಾರಿಗೆ ಕೇಂದ್ರದ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು. ಮಹಿಳೆಯರಿಗೆ ಹೆಚ್ಚಿನ ಉದ್ಯಮ ಮಾಡಲು ಅಧಿಕ ಅನುದಾನ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಜಿ.ಪರಶುರಾಮಪ್ಪ ತಿಳಿಸಿದ್ದಾರೆ.
ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ 20 ಕೋಟಿ ರೂ.ವರೆಗಿನ ಸಾಲ ಒದಗಿಸಲು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಹಿಳೆಯರಿಗೆ ಹೊಸ ಉದ್ಯಮ ಮಾಡಲು ಹೆಚ್ಚು ಪ್ರೋತ್ಸಾಹ ಧನವನ್ನು ನೀಡುವುದು ಸಂತಸದ ವಿಚಾರ. ಕೈಗಾರಿಕಾ ಇಲಾಖೆಗೆ ಹೆಚ್ಚಿನ ಅನುದಾನವನ್ನು ಬಜೆಟ್ಟಿನಲ್ಲಿ ನೀಡಿರುವುದೂ ಶ್ಲಾಘನೀಯ.