

ಸಾಗರ: ಸಮಾಜ ಸನ್ಮಾರ್ಗದಲ್ಲಿ ನಡೆಯಬೇಕಾದರೆ ಸ್ತ್ರೀಯರು ನೆಮ್ಮದಿಯಿಂದ ಬದುಕು ನಡೆಸಬೇಕು ಎಂದು ಹುಬ್ಬಳ್ಳಿ ಶ್ರೀಮಾತಾ ಆಶ್ರಮದ ಸಾಧ್ವಿ ತೇಜೋಮಯೀ ಮಾತಾಜಿ ಹೇಳಿದರು.
ಒಕ್ಕಲಿಗರ ಸಭಾಭವನದಲ್ಲಿ ಮಂಗಳವಾರ ವಿಶ್ವ ಹಿಂದು ಪರಿಷತ್, ಮಾತೃಶಕ್ತಿ, ಬಜರಂಗ ದಳ ಮತ್ತು ದುರ್ಗಾವಾಹಿನಿಯಿಂದ ಏರ್ಪಡಿಸಿದ್ದ ಭವಿಷ್ಯದ ಭಾರತದಲ್ಲಿ ಯುವ ಪೀಳಿಗೆಯ ಪಾತ್ರ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಸೀತೆ, ಸಾವಿತ್ರಿಯಂತಹ ಆದರ್ಶ ನಾರಿಯರು ಭಾರತೀಯ ಮಹಿಳಾ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ಮಹಿಳೆಯರಲ್ಲಿರುವ ಸುಪ್ತ ಶಕ್ತಿಯನ್ನು ನಾವು ಜಾಗೃತಿಗೊಳಿಸಬೇಕು. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಹಿಂದು ವಿಚಾರಧಾರೆಗಳು ಪ್ರಸ್ತುತ ಅಗತ್ಯವಾಗಿವೆ ಎಂದರು.
ವಿಎಚ್‌ಪಿ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ಮಾತೃಶಕ್ತಿ ಪ್ರಾಂತ ಸಂಯೋಜಕಿ ಶುಭಾ, ಬಜರಂಗ ದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ, ಶ್ವೇತಾ ಅನಿಲ್, ಪುಷ್ಪಾ ಪೈ, ಹರ್ಷಿತಾ ಜೀವನ್, ಅ.ಪು.ನಾರಾಯಣಪ್ಪ, ಆರಗ ಚಂದ್ರಶೇಖರ್, ಸುನೀಲ್ ರುದ್ರಪ್ಪ, ನವೀನ್, ಗಣೇಶಪ್ರಸಾದ್, ಮಂಜು ಗೌಡ, ಸುಪ್ರಿತಾ, ಉಮಾ, ಹರ್ಷಿತಾ ಇತರರಿದ್ದರು