ಮಹಿಳೆಗೆ ವಂಚಿಸಿದವನ ವಿರುದ್ಧ ದೂರು

Published on

ಚಿಕ್ಕಬಳ್ಳಾಪುರ: ವಿಧವೆಯನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಮಹಿಳಾ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಶಿಡ್ಲಘಟ್ಟ ತಾಲೂಕಿನ ಅಂಬಿಗಾನಹಳ್ಳಿ ಸುನೀಲ್​ (34) ಆರೋಪಿ. ವಿಧವೆಯನ್ನು ಮದುವೆಯಾಗಿದ್ದಾನೆ. ನಂತರ ವಿಷಯ ಮುಚ್ಚಿಟ್ಟು, ಸಂಬಂಧಿ ಯುವತಿಯನ್ನೂ ಮದುವೆಯಾಗಿದ್ದಾನೆ. ಈಗ ಸಂತ್ರಸ್ತೆ ದಾಖಲೆಗಳೊಂದಿಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ನಾಪತ್ತೆಯಾಗಿದ್ದಾನೆ. ಪ್ರಕರಣದ ಹಿನ್ನೆಲೆ: ಗಂಡನನ್ನು ಕಳೆದುಕೊಂಡಿದ್ದ ಮಹಿಳೆ ಬಾಡಿಗೆ ಮನೆಯಲ್ಲಿ ಮಗಳ ಜತೆ ಜೀವನ ನಡೆಸುತ್ತಿದ್ದಳು. ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿ ಯಾಗಿದ್ದ ಸುನೀಲ್​ ಪರಿಚಯ ಬೆಳೆದು, ಇಬ್ಬರು ಸಹ ಜೀವನ ನಡೆಸಿದ್ದಾರೆ. ದೇಗುಲದಲ್ಲಿ ಮದುವೆಯಾಗಿ ಬಳಿಕ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ನೋಂದಾಯಿ ಸಿದ್ದಾರೆ. ಈಗ ಆಕೆ 8 ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗಿದ್ದ ಯುವಕ ಕೈ ಕೊಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net