

ಮಹಿಳೆ ಸೇರಿದಂತೆ ಮೂವರಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ 20 ರಿಂದ 21 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೆ.ಆರ್.ಪೇಟೆಯ ರೇಖಾ, ಶ್ರೀರಂಗಪಟ್ಟಣದ ರಾಘವೇಂದ್ರಗೆ 21 ವರ್ಷ ಶಿಕ್ಷೆ ಮತ್ತು ಉಮೇಶ ಎಂಬಾತನಿಗೆ 20 ವರ್ಷ ಕಠಿಣ ಕಾರಾಗೃಹ ವಿಧಿಸಲಾಗಿದೆ.
ಏನಿದು ಘಟನೆ: 2020ರ ಆಗಸ್ಟ್ 14 ರಂದು 16 ವರ್ಷದ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ ಸಂಬಂಧ ನಗರದ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, 9 ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ನ್ಯಾಯಾಧೀಶರಾದ ಆನಂದ್ ಪಿ.ಹೊಗಾಡೆ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕೆ.ಬಿ.ಜಯಂತಿ ವಾದಮಂಡಿಸಿದ್ದರು. 9 ಮಂದಿಯಲ್ಲಿ ಮೂವರು ಶಿವರಾಮು, ಅಭಿಷೇಕ್, ಸಿದ್ದರಾಮು ಮೃತಪಟ್ಟಿದ್ದು, ತಲೆ ಮರೆಸಿಕೊಂಡಿರುವ ಗಿರೀಶ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.