ಮಹಾರಾಜ ಕಾಲೇಜು ತಂಡ ನಗರ ಅಂತರ ಕಾಲೇಜು ಪುರುಷರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್

ಮಹಾರಾಜ ಕಾಲೇಜು ತಂಡ ನಗರ ಅಂತರ ಕಾಲೇಜು ಪುರುಷರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆ
sportsday
Sports, set of athletes of various sports disciplines. Isolated vector silhouettes. Run, soccer, hockey, volleyball, basketball, rugby, baseball, american football, cycling, golf
Published on

ಉತ್ತಮ ಪ್ರದರ್ಶನ ನೀಡಿದ ಮಹಾರಾಜ ಕಾಲೇಜು ತಂಡ ನಗರ ಅಂತರ ಕಾಲೇಜು ಪುರುಷರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಎನ್‌ಐಇ ವತಿಯಿಂದ ಹೂಟಗಳ್ಳಿ ಕೈಗಾರಿಕಾ ಪ್ರದೇಶದ ಎನ್‌ಐಇ ನಾರ್ತ್ ಕ್ಯಾಂಪಸ್‌ನಲ್ಲಿ ಗುರುವಾರ ಆಯೋಜಿಸಿದ್ದ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಪಿಜಿಎಸ್‌ಇ ತಂಡದ ವಿರುದ್ಧ 25-15, 25-15 ರಿಂದ ಜಯ ಸಾಧಿಸಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಜೆಎಸ್‌ಎಸ್ ವಿವಿ ತಂಡ 25-21, 19-25, 25-17 ರಿಂದ ಎನ್‌ಐಇ ತಂಡವನ್ನು ಮಣಿಸಿತು.

ಪುರುಷರ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಎನ್‌ಐಇ ಕಾಲೇಜು ತಂಡ ಚಾಂಪಿಯನ್ ಪಟ್ಟಕೇರಿತು. ಅಂತಿಮ ಪಂದ್ಯದಲ್ಲಿ ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡದ ವಿರುದ್ಧ 32-30 ರಿಂದ ಜಯ ಸಾಧಿಸಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಎಸ್‌ಬಿಆರ್‌ಆರ್ ಎಂಎಫ್‌ಜಿಸಿ ತಂಡ 15-11 ರಿಂದ ಸಂತ ಜೋಸೇಫ್ ಎಫ್‌ಜಿಸಿ ತಂಡವನ್ನು ಮಣಿಸಿತು.

ಮಹಿಳಾ ವಿಭಾಗದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಟೆರೇಷಿಯನ್ ಕಾಲೇಜು ಪ್ರಥಮ ಸ್ಥಾನ ಪಡೆಯಿತು. ಫೈನಲ್ ಪಂದ್ಯದಲ್ಲಿ ಜಿಎಸ್‌ಎಸ್‌ಐಟಿಡ್ಬುೃ ತಂಡವನ್ನು 12-3 ರಿಂದ ಸೋಲಿಸಿತು. ಮೂರನೇ ಸ್ಥಾನಕ್ಕಾಗಿ ಆಯೋಜಿಸಿದ್ದ ಪಂದ್ಯದಲ್ಲಿ ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ತಂಡವು 3-2 ರಿಂದ ಶೇಷಾದ್ರಿಪುರಂ ಪದವಿ ಕಾಲೇಜು ವಿರುದ್ಧ ಜಯ ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net