ಮಹಾನ್ ವ್ಯಕ್ತಿಗಳೆಲ್ಲಾ ಬಡತನದಿಂದಲೇ ಬಂದವರು

17ark3
Published on

ಅರಕಲಗೂಡು: ತಾಲೂಕು ಕನಕ ನೌಕರರ ಸಂಘದ ವತಿಯಿಂದ ರಾಮನಾಥಪುರದ ಕನಕದಾಸ ಸಮುದಾಯ ಭವನದಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.


ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಮಾಜಿ ರಾಷ್ಟ್ರಪತಿ ದಿ.ಡಾ. ಅಬ್ದುಲ್ ಕಲಾಂ, ಕೆ.ಆರ್. ನಾರಾಯಣನ್ ಮತ್ತು ಡಾ.ವಿಶ್ವೇಶ್ವರಯ್ಯ ಅವರಂತಹ ಮಹಾನ್ ವ್ಯಕ್ತಿಗಳೆಲ್ಲ ಕಡು ಬಡತನದಿಂದ ಬೆಳೆದು ಬಂದವರು. ವಿದ್ಯಾರ್ಥಿಗಳು ಕೂಡ ಶ್ರದ್ಧೆಯಿಂದ ಕಲಿತರೆ ಉನ್ನತ ಸ್ಥಾನಕ್ಕೇರಬಹುದು ಎಂದರು.


ಡಾ. ಆಕರ್ಷ್ ಮತ್ತು ಡಾ.ಎಂ ಕಾವ್ಯಾ ಸಮಾರಂಭ ಉದ್ಘಾಟಿಸಿದರು. ತಾಲೂಕು ಕನಕ ನೌಕರರ ಸಂಘದ ಉಪಾಧ್ಯಕ್ಷ ಬಿ.ಜೆ. ಮಂಜೇಗೌಡ, ಕಾರ್ಯದರ್ಶಿ ಮೊಗಣ್ಣ, ತಾಲೂಕು ಕುರುಬ ಸಂಘದ ಕಾರ್ಯದರ್ಶಿ ಮುತ್ತಿಗೆ ರಮೇಶ್ ಮಾತನಾಡಿದರು. ಖಜಾಂಚಿ ಬಸವರಾಜ್, ಕೃಷ್ಣ, ಪುಟ್ಟಸ್ವಾಮಿ, ಆರ್.ಡಿ. ಶಿವಕುಮಾರ್, ಅರಸೀಕೆರೆ ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಬಸವರಾಜ್, ಸಂಘದ ನಿರ್ದೇಶಕರು ಇದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ, ಎಂಬಿಬಿಎಸ್, ವಿವಿಧ ಫಾರ್ಮ್ ಸೈನ್ಸ್‌ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ, ಇಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 37 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net