

ಮೈಸೂರು ಜಿಲ್ಲೆಯ ಸರಗೂರಿನ ಅರಣ್ಯ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದೆ ಎಂದು ಅಲ್ಲಿನ ಜನರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಮೆಸ್ ಕೂಡ ಅಳವಡಿಸಲಾಗಿದೆ. ಮುಂದೆ ಸೋಲಾರ್ ಕೂಡ ಅಳವಡಿಸುತ್ತೇವೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಮೈಸೂರಲ್ಲಿ ಬಸವ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅನುದಾನ ಕೊಡಿಸುತ್ತೇನೆ. ಇದಕ್ಕೆ ಸಮಾಜದ ಎಲ್ಲ ಮುಖಂಡರು ಪಕ್ಷಾತೀತವಾಗಿ ನಿಯೋಗ ತೆರಳಿ ಮುಖ್ಯಮಂತ್ರಿ ಅವರ ಬಳಿ ಕೇಳೋಣ. ಮಹಾಸಭಾದ ವತಿಯಿಂದ ಬಸವ ಭವನ ನಿರ್ಮಾಣ ಕಾರ್ಯಕ್ಕೆ ತಕ್ಷಣವೇ 50 ಲಕ್ಷ ರೂ. ಬಿಡುಗಡೆ ಮಾಡಲಾಗುತ್ತದೆ ಎಂದರು.
ಮಹದೇಶ್ವರ ಬೆಟ್ಟದಲ್ಲಿ ಸ್ಮತಿ ವನ ನಿರ್ಮಾಣಕ್ಕೆ ಅರಣ್ಯ ಇಲಾಖೆ ವತಿಯಿಂದ ಒಂದು ಕೋಟಿ ರೂ. ಅನುದಾನ ನೀಡಲಾಗುತ್ತದೆ. ಅಲ್ಲಿ ವಿನ್ಯಾಸ ಹೇಗೆ ಇರಬೇಕು? ಯಾವ ರೀತಿ ನಿರ್ಮಾಣವಾಗಬೇಕು? ಎಂದು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.