

ನಗರದ ಕ್ಯಾತಮಾರನಹಳ್ಳಿಯ ವಿವಾದಿತ ಮಸೀದಿಯ ಬೀಗ ತೆಗೆಯುವ ವಿಚಾರ ಸಂಬಂಧ ಮಾರ್ಚ್ 14 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ವಿವಾದಿತ ಮಸೀದಿ ಬೀಗ ಹಾಕಿದ್ದ ವಿಚಾರದ ಹಿನ್ನಲೆಯಲ್ಲಿ ಅಲೀಮಾ ಸ್ಯಾಡ್ಲಿ ಎಜುಕೇಷನ್ ಇನ್ಸ್‌ಟ್ಯಿೂಷನ್ ಮತ್ತು ಮಸ್ಜಿದ್ ಇ ಸಿದ್ದಿಕಿ ಇ ಅಕ್ಬರ್ ಟ್ರಸ್ಟ್‌ನವರು ಹೈಕೋರ್ಟ್ ಮೊರೆ ಹೋಗಿದ್ದರು. ಟ್ರಸ್ಟ್ ಸದಸ್ಯರ ಮನವಿ ಆಲಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಮಸೀದಿಗೆ ಬೀಗ ಹಾಕಿರುವುದನ್ನು ಮುಂದುವರಿಸುವ ಅಥವಾ ಸದರಿ ಟ್ರಸ್ಟ್ ಬೀಗ ತೆರೆದು ಕಾರ್ಯ ಪರಾಮರ್ಶಿಸಲು ಆಸಕ್ತ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳ ಅಭಿಪ್ರಾಯ ಪಡೆಯಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.ಪ್ರಕರಣವನ್ನು ಸ್ಥಳೀಯಮಟ್ಟದಲ್ಲೇ ಮಾತುಕತೆ ನಡೆಸಿ 12 ವಾರಗಳಲ್ಲಿ ಇತ್ಯರ್ಥ ಪಡಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ಕೋರ್ಟ್ ನಿರ್ದೇಶನ ನೀಡಿದ್ದರು. ಈ ಹಿನ್ನಲೆಯಲ್ಲಿ ಕಳೆದ ಮಾ. 10 ರಂದು ನಿಗದಿಯಾಗಿದ್ದ ಈ ಸಭೆ ಈಗ 14 ರಂದು ನಡೆಯಲಿದೆ.