ಮಳೆಯಿಂದಾದ ಮನೆ ಹಾನಿ ಪರಿಹಾರಕ್ಕೆ ಒತ್ತಾಯ

22SARAG2
ಸರಗೂರು ತಾಲೂಕಿನ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಗ್ರಾಪಂ ಕೃಷ್ಣಮೂರ್ತಿ ಉಪಾಧ್ಯಕ್ಷೆ ಮಂಜುಳಾ ಅಂಕನಾಯಕ, ಸದಸ್ಯರಾದ ಲಕ್ಷ್ಮೀ ನಾಗೇಂದ್ರ, ವಿಶಾಲಾಕ್ಷಿ ಪುಟ್ಟಸ್ವಾಮಿ ಇದ್ದರು.
Published on

ಸರಗೂರು: ತಾಲೂಕಿನ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಂಟಾದ ಮನೆಹಾನಿಗೆ ಪರಿಹಾರ ನೀಡುವಂತೆ ಸಾಕಷ್ಟು ದೂರುಗಳು ಸಲ್ಲಿಕೆಯಾದವು.

ಸರಗೂರು ತಾಲೂಕಿನ ಕೆ. ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಖಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನರು ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು. ಶಂಖಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಹಸೀಲ್ದಾರ್ ಎದುರೇ ಗ್ರಾಪಂ ಅಧಿಕಾರಿಗಳು ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಪ್ರಚಾರ ಮಾಡಿಲ್ಲ ಎಂದು ದೂರಿದರು.

ಶಂಕಹಳ್ಳಿ ಗ್ರಾಮದ ಶಾಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಟ್ಟಡದ ಕೊರತೆ ಇದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಹೊಸ ಬಡಾವಣೆಗೆ ನಿರಂತರವಾಗಿ ವಿದ್ಯುತ್ ಪೂರೈಕೆ ನೀಡಬೇಕು. ಸರಗೂರು ಪೊಲೀಸ್ ಠಾಣೆ ಗ್ರಾಮದಿಂದ 35 ಕಿಮೀ ದೂರದಲ್ಲಿದ್ದು, ಹಂಪಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ನಮ್ಮ ಗ್ರಾಮವನು ಸೇರ್ಪಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಕಾಳಿಹುಂಡಿ ಗ್ರಾಮದ ಗ್ರಾಪಂ ಸದಸ್ಯ ರತ್ತಮ್ಮ ನಾರಾಯಣ ಮಾತನಾಡಿ ಇಜ್ಬಾಲ್ ಗ್ರಾಮದಿಂದ ಕಾಳಿಹುಂಡಿ ಗ್ರಾಮದವರಗೆ ರಸ್ತೆ ಗುಂಡಿಮಯವಾಗಿದ್ದು, ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ. ಕೂಡಲೇ ರಸ್ತೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿದರು.

ಸಾರ್ವಜನಿಕರ ಮನವಿ ಆಲಿಸಿದ ತಹಸೀಲ್ದಾರ್ ಚೆಲುವರಾಜು ಮಾತನಾಡಿ, ಈ ಭಾಗದ ಜನ ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಇಂದು ಸ್ವೀಕರಿಸಿದ ಮನವಿಗಳನ್ನು ಆದ್ಯತೆ ಮೇಲೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಚೆಲುವರಾಜು ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ ಮಾಡಿದರು. ಗ್ರಾಪಂ ಕೃಷ್ಣಮೂರ್ತಿ ಉಪಾಧ್ಯಕ್ಷೆ ಮಂಜುಳಾ ಅಂಕನಾಯಕ, ಸದಸ್ಯರಾದ ಲಕ್ಷ್ಮೀ ನಾಗೇಂದ್ರ, ವಿಶಾಲಾಕ್ಷಿ ಪುಟ್ಟಸ್ವಾಮಿ, ಪ್ರೀತಿ ನಂಜಪ್ಪ, ವರದನಾಯಕ, ರುದ್ರಯ್ಯ, ನಾಗರಾಜು, ಚಿಕ್ಕಕಾಳನಾಯಕ, ಭರತ್, ಜ್ಯೋತಿನಾಗರಾಜು, ಕೆಂಡಗಣ್ಣ, ಮಾಜಿ ಅಧ್ಯಕ್ಷ ಶಿವಶಂಕರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ, ಕಬಿನಿ ಉಪವಿಭಾಗ ನೀರಾವರಿ ಇಲಾಖೆ ಅಧಿಕಾರಿ ಉಷಾ, ಪಶು ಸಂಗೋಪನಾ ಇಲಾಖೆ ಅಧಿಕಾರಿ ವೈ.ಡಿ.ರಾಜಣ್ಣ, ಎಪಿಎಂಸಿ ಅಧಿಕಾರಿ ವಸಂತಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net