ಮಳೆಗಾಗಿ ಪಟ್ಟಲದಮ್ಮ ದೇವಿಗೆ ಮೊರೆ

28 KRN-1
ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಮಳೆಗಾಗಿ ಶ್ರೀ ಪಟ್ಟಲದಮ್ಮ ದೇವಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು.
Published on

ಕೆ.ಆರ್.ನಗರ: ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಆಂಜನೇಯ ಬಡಾವಣೆಯ ತೋಟವೊಂದರಲ್ಲಿರುವ ಶ್ರೀ ಪಟ್ಟಲದಮ್ಮ ದೇವಿ ವಿಗ್ರಹಕ್ಕೆ ಮಂಗಳವಾರ ಭಕ್ತರು ಪೂಜಾ ಕೈಂಕರ್ಯ ನೆರವೇರಿಸಿದರು.

ಪುರಸಭಾ ಮಾಜಿ ಸದಸ್ಯ ಎಸ್.ಯೋಗಾನಂದ ಮಾತನಾಡಿ, 10 ವರ್ಷದಿಂದ ದೇವಿಗೆ ಪೂಜೆ ಸಲ್ಲಿಸಿರಲಿಲ್ಲ. ಈ ಬಾರಿ ಸರಳವಾಗಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಭಕ್ತರ ಸಹಕಾರದೊಂದಿಗೆ ಇದನ್ನು ಮುಂದುವರಿಸಲಾಗುವುದು. ಅಲ್ಲದೆ ಸಕಾಲದಲ್ಲಿ ಮಳೆ ಆಗಲೆಂದು ಪ್ರಾರ್ಥಿಸಲಾಗಿದೆ ಎಂದರು.

ಭಕ್ತರಾದ ಜಗದೀಶ್, ರಾಘವೇಂದ್ರ, ಉಮೇಶ್, ಕೆ.ಪಿ.ಅಶ್ವತ್ಥನಾರಾಯಣ್, ಕೆ.ಟಿ.ಜಯರಾಮ್, ಕೆ.ಟಿ.ವೆಂಕಟೇಶ್, ರಂಗರಾಜು, ಗೋಪಿ, ನಟರಾಜು, ಲೋಕೇಶ್, ದಯಾನಂದ, ರವಿ, ತ್ರಿವೇಣಿ, ಗೀತಾ, ಲಕ್ಷ್ಮಮ್ಮ, ಜ್ಯೋತಿ, ಶೀಲಾ, ನಾಗರತ್ನಾ, ಸುನೀತಾ ಇದ್ದರು. ಮಂಗಳಾರತಿ ನಂತರ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದ ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net